ನವದೆಹಲಿ: ತಮಿಳುನಾಡಿನ ಕೋವಲಂ ಮತ್ತು ಪುದುಚೇರಿಯ ಈಡನ್ ಕಡಲ ತೀರಗಳು (ಬೀಚ್) ಪ್ರತಿಷ್ಠಿತ ಅಂತರರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಭೂಪೇಂದರ್ ಯಾದವ್, "ಕೋವಲಂ ಮತ್ತು ಈಡನ್ ಬೀಚ್‌ಗಳನ್ನು ಒಳಗೊಂಡಂತೆ ಭಾರತದಲ್ಲಿ ಈಗ 10 ಅಂತರರಾಷ್ಟ್ರೀಯ 'ಬ್ಲೂ ಫ್ಲಾಗ್' ಬೀಚ್‌ಗಳಿವೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸ್ವಚ್ಛ ಮತ್ತು ಹಸಿರು ಭಾರತದತ್ತ ನಮ್ಮ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು" ಎಂದು ತಿಳಿಸಿದ್ದಾರೆ.
ಬ್ಲೂ ಫ್ಲಾಗ್ ಎಂದರೇನು?
ಕಡಲ ತೀರ (ಬೀಚ್)ಗಳಲ್ಲಿನ ಸ್ವಚ್ಛತೆ, ಪರಿಸರ ಸ್ನೇಹಿ ವಾತಾವರಣ ಮತ್ತಿತರೆ ಅಂಶಗಳನ್ನು ಪರಿಗಣಿಸಿ ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ (ಎಫ್‌ಇಇ) ಈ ಬ್ಲೂ ಫ್ಲಾಗ್ ಪ್ರಮಾಣ ಪತ್ರ ನೀಡುತ್ತದೆ. ಇಂತಹ ಪ್ರಮಾಣಪತ್ರ ಪಡೆದ ಬೀಚ್‌ಗಳಲ್ಲಿ ನೀಲಿ ಬಣ್ಣದ ಧ್ವಜವನ್ನು ಆರೋಹಣ ಮಾಡಲಾಗುವುದು. ವಿದೇಶಗಳಲ್ಲಿ ಇಂತಹ ಪ್ರಮಾಣಪತ್ರ ಪಡೆದ ಬೀಚ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ದಿ ದೃಷ್ಟಿಯಿಂದ ಇಂತಹ ಪ್ರಮಾಣಪತ್ರ ಪಡೆಯುವುದು ಅತ್ಯಂತ ಪ್ರಮುಖವಾಗಿದೆ.
PublicNext
22/09/2021 02:53 pm