ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ವಿಆರ್ ಚೌಧರಿ ಆಯ್ಕೆ

ನವದೆಹಲಿ: ರಕ್ಷಣಾ ಸಚಿವಾಲಯವು ಪ್ರಸ್ತುತ ವಾಯುಪಡೆಯ ವೈಸ್ ಚೀಫ್ ಏರ್ ಮಾರ್ಷಲ್ ವಿಆರ್ ಚೌಧರಿ ಅವರನ್ನು ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಿದೆ. ಪ್ರಸ್ತುತ ವಾಯುಪಡೆಯ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಅವರು ಸೆಪ್ಟೆಂಬರ್ 30ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಏರ್ ಮಾರ್ಷಲ್ ವಿಆರ್ ಚೌಧರಿ ಅವರನ್ನು 1982ರ ಡಿಸೆಂಬರ್ 28ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಗಿತ್ತು. ಪ್ರಸ್ತುತ ವಾಯುಪಡೆಯ ವೈಸ್ ಚೀಫ್ ಸೇರಿದಂತೆ ವಿವಿಧ ಹಂತಗಳಲ್ಲಿ ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ಸೂಚನಾ ನೇಮಕಾತಿ ವಿಭಾಗಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವಿಆರ್ ಚೌಧರಿ ಅವರು ಪರಂ ವಿಶಿಷ್ಟ ಸೇವಾ ಪದಕ, ಪರಂ ವಿಶಿಷ್ಟ ಸೇವಾ ಪದಕ ಮತ್ತು ವಾಯು ಪದಕಗಳ ಗೌರವಕ್ಕೆ ಭಾಜನರಾಗಿದ್ದಾರೆ.

Edited By : Vijay Kumar
PublicNext

PublicNext

22/09/2021 07:31 am

Cinque Terre

32.82 K

Cinque Terre

0