ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾವೇರಿ ತೆರವು ಮಾಡದ ಕಾರಣ ರೇಸ್‌ವ್ಯೂ ಕಾಟೇಜ್ ಗೆ ತೆರಳಲು ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡಿದ್ದಾರೆ. ಹೌದು ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗಿದ್ದು, ರೇಸ್ ವ್ಯೂ ಕಾಟೇಜ್ ವಸತಿ ಗೃಹ ನೀಡಲಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ಗೃಹ ಕಚೇರಿ ಸಂಖ್ಯೆ 1ರ ರೇಸ್ ವ್ಯೂ ಕಾಟೇಜ್ ವಸತಿ ಗೃಹ ಹಂಚಿಕೆ ಮಾಡಲಾಗಿದೆ.
ಈ ಹಿಂದೆ ಸಚಿವ ಅಶ್ವತ್ಥ್ ನಾರಾಯಣಗೆ ಈ ವಸತಿ ಗೃಹವನ್ನು ಹಂಚಿಕೆ ಮಾಡಲಾಗಿತ್ತು. ಇದೀಗ ಸಚಿವ ಅಶ್ವತ್ಥ್ ನಾರಾಯಣ್ ಅವರಿಂದ ರೇಸ್ ವ್ಯೂ ಕಾಟೇಜ್ ವಸತಿ ಗೃಹ ಹಿಂಪಡೆದು ಸಿಎಂ ಬೊಮ್ಮಾಯಿ ಅವರಿಗೆ ನೀಡಲಾಗಿದೆ.
PublicNext
17/08/2021 12:02 pm