ನವದೆಹಲಿ: ಇಂದು ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವ ಉತ್ಸಾಹ ಅಲ್ಪಮಟ್ಟಿಗೆ ಕಡಿಮೆಯಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಈ ಹಿನ್ನೆಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಕ್ರೀಡಾಪಟುಗಳು ಸ್ವಾತಂತ್ರ್ಯೋತ್ಸದಲ್ಲಿ ಭಾಗಿಯಾಗಿದ್ದಾರೆ. ದೆಹಲಿಯ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ನೆರವೇರಿಸಿದರು. ಭದ್ರತಾ ಪಡೆಗಳಿಂದ 21 ಗನ್ ಸೆಲ್ಯೂಟ್ ಸಲ್ಲಿಸಲಾಯಿತು. ಹೆಲಿಕಾಪ್ಟರ್‌ಗಳು ಹೂವಿನ ಮಳೆ ಸುರಿಸಿದವು.
ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು:
* ಇನ್ಮುಂದೆ ಪ್ರತಿ ವರ್ಷ ಆಗಸ್ಟ್ 14ರಂದು 'ವಿಭಜನೆಯ ಕರಾಳ ನೆನಪಿನ ದಿನವಾಗಿ' ಆಚರಿಸಲಾಗುತ್ತದೆ.
* 'ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು. ತಿಳಿಗೇಡಿಗಳಿಂದ ಭುಗಿಲೆದ್ದ ದ್ವೇಷ–ಹಿಂಸಾಚಾರದಲ್ಲಿ ನಮ್ಮ ಲಕ್ಷಾಂತರ ಸೋದರ ಸೋದರಿಯರು ಸ್ಥಳಾಂತರಗೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡರು.
* ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಎಲ್ಲ ಕ್ರೀಡಾಪಟುಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಪ್ರಧಾನಿ ಮೋದಿ ಪ್ರೋತ್ಸಾಹಿಸಿ, ಅಭಿನಂದನೆ ಸಲ್ಲಿಸಿದರು.
* ಎಲ್ಲರೂ ಪದಕ ಗೆಲ್ಲುವುದು ಸಾಧ್ಯವಾಗದಿದ್ದರೂ, ದೇಶದ ಯುವ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಾರೆ.
* ಆಧುನಿಕ ಜಗತ್ತಿನಲ್ಲಿ ಎಲ್ಲ ರೀತಿಯ ತಂತ್ರಜ್ಞಾನ, ಮೂಲಸೌಕರ್ಯಗಳ ಅಭಿವೃದ್ಧಿಗೆ, ಅಳವಡಿಕೆಗೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕಿದೆ.
* ಲಡಾಖ್‌ನಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಲಡಾಖ್‌ನ 'ಇಂಡಸ್ ಸೆಂಟ್ರಲ್ ಯೂನಿವರ್ಸಿಟಿ' ದೇಶದ ಉನ್ನತ ಶಿಕ್ಷಣ ಕೇಂದ್ರವಾಗಲಿದೆ.
* 'ಸಬ್‌ಕಾ ಸಾತ್ ಸಬ್‌ಕಾ ವಿಕಾಸ್– ಸಬ್‌ಕಾ ವಿಶ್ವಾಸ್'ನಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿದ್ದೇವೆ. ಇಂದು ಘೋಷಿಸುತ್ತಿದ್ದೇನೆ, ನಮ್ಮ ಎಲ್ಲರ ಗುರಿಯನ್ನು ಸಾಧಿಸಲು 'ಸಬ್‌ಕಾ ಸಾತ್ ಸಬ್‌ಕಾ ವಿಕಾಸ್–ಸಬ್‌ಕಾ ವಿಶ್ವಾಸ್ ಮತ್ತು ಸಬ್‌ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಅತ್ಯಗತ್ಯವಾಗಿದೆ.
* ದೇಶದ ಎಲ್ಲ ಯೋಜನೆಗಳು ಶೇ 100ಕ್ಕೆ ನೂರಷ್ಟು ಜನರಿಗೆ ಸಂಪೂರ್ಣ ತಲುಪಬೇಕು.
* ಕಠಿಣ ಸಮಯದಲ್ಲಿ ದೇಶದ ಅಸಾಮಾನ್ಯ ಹೋರಾಟ, ಕರ್ತವ್ಯದ ಮೂಲಕ ಕೋವಿಡ್ ಎದುರಿನ ಸಮರವನ್ನು ನಡೆಸಿದೆ. ಸಾಕಷ್ಟು ತಾಳ್ಮೆಯಿಂದ ಕೋವಿಡ್ ವಿರುದ್ಧ ಹೋರಾಟ ನಡೆಸಿದೆ.
* ಈವರೆಗೂ ದೇಶದ 54 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ತಲುಪಿದೆ.
* 25 ವರ್ಷದಲ್ಲಿ ಹೊಸ ಭಾರತವನ್ನು ಕಟ್ಟಲು ಪಣ
* ದೇಶದ 54 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ.. ಇದು ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನವಾಗಿದೆ
* ಮೊದಲಿಗಿಂತ ಈಗ ಸರ್ಕಾರ ಯೋಜನೆಗಳ ವೇಗ ಹೆಚ್ಚಿದೆ
* ಪಿಂಚಣಿ ಯೋಜನೆ, ವಸತಿ ಯೋಜನೆಯ ಜನರಿಗೆ ತಲುಪಿದೆ
* ಆಯುಷ್ಮಾನ್ ಕಾರ್ಡ್, ಉಜ್ವಲ, ವಿಮಾ ಯೋಜನೆ ದೇಶದ ಜನತೆಗೆ ತಲುಪಿದೆ
* ಶೇ.100 ಮನೆಗಳಿಗೆ ವಿದ್ಯುತ್ ತಲುಪಿದೆ
* 2 ವರ್ಷದಲ್ಲಿ 4.5 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿದೆ
* ನಾಗರಿಕರಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬೇಕಿದೆ
* ಮಕ್ಕಳಲ್ಲಿ ಪೌಷ್ಟಿಕಾಂಶ ಕಡಿಮೆಯಾಗದಂತ ನೋಡಿಕೊಳ್ಳಬೇಕಿದೆ
* ಸರ್ಕಾರ ಬೇರೆ ಬೇರೆ ಯೋಜನೆಗಳ ಮೂಲಕ ಜನರಿಗೆ ಅಕ್ಕಿ ನೀಡಲಾಗುತ್ತಿದೆ
* ವೈದ್ಯಕೀಯ ಶಿಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ.. ಮೆಡಿಕಲ್ ಸೀಟ್ಗಳನ್ನು ಹೆಚ್ಚಳ ಮಾಡಲಾಗಿದೆ
* 75 ವೆಲ್ನೆಸ್ ಸೆಂಟರ್ಗಳನ್ನು ದೇಶದಲ್ಲಿ ತೆರೆಯಲಾಗಿದೆ
* ಬಡವರು, ದಲಿತರು, ಒಬಿಸಿಗಳಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ
* ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೆ ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ
* ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೂ ಸಿದ್ಧತೆ ನಡೆಸಲಾಗಿದೆ.. ಲಡಾಖ್‌ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ವೇಗವಾಗಿ ನಡೆಯುತ್ತಿದೆ
* ಶ್ರೇಷ್ಠ ಭಾರತ ನಿರ್ಮಾಣದ ಉತ್ಸಾಹ ಹೆಚ್ಚಳವಾಗಿದೆ
* ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದ್ದು.. ಹೃದಯ ಮೂಲಕವೂ ಈಶಾನ್ಯ ರಾಜ್ಯಗಳೊಂದಿಗೆ ಸಂಬಂಧ ಬೆಸೆಯಲಾಗುತ್ತಿದೆ
* ಸಮುದ್ರದಲ್ಲಿರುವ ಸಂಪನ್ಮೂಲಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ..
* 25 ವರ್ಷದಲ್ಲಿ ಹೊಸ ಭಾರತವನ್ನು ಕಟ್ಟಲು ಪಣ
* ದೇಶದಲ್ಲಿ ಸಹಕಾರವಾದದ ಮೂಲಕ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ
* ದೇಶದಲ್ಲಿ 110 ಆಕಾಂಕ್ಷಿ ಜಿಲ್ಲೆಗಳಿದ್ದು, ಎಲ್ಲಾ ಜಿಲ್ಲೆಗಳಿಗೂ ಒತ್ತು ನೀಡಲಾಗುತ್ತಿದೆ
* ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಮಾಡಿದ್ದೇವೆ
* ಮಹಿಳಾ ಉದ್ಯಮಿಗಳ ಉತ್ಪನ್ನಗಳು ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತಿದೆ
* ಗ್ರಾಮಗಳಲ್ಲಿ ಡಿಜಿಟಲ್ ಕಾಂತ್ರಿಯಾಗುತ್ತಿದೆ..
* ಕೃಷಿ ಕ್ಷೇತ್ರದಲ್ಲೂ ವೈಜ್ಞಾನಿಕ ತಂತ್ರಜ್ಞಾನ ಅವಳಡಿಸಿಕೊಳ್ಳ ಬೇಕಿದೆ
* ದೇಶ ಶೇ.80 ರೈತರ ಬಳಿಕ 2 ಹೆಕ್ಟೆರ್ ಗಿಂತ ಕಡಿಮೆ ಭೂಮಿ ಇದ್ದು.. ಕೃಷಿ ಕ್ಷೇತ್ರದ ಎದುರು ದೊಡ್ಡ ಸವಾಲು ಇದೆ
* ಕಿಸಾನ್ ರೈಲು ಸಣ್ಣ ಸಣ್ಣ ರೈತರಿಗೆ ತಮ್ಮ ಉತ್ಪನ್ನಗಳನ್ನು ದೇಶದ ಮೂಲೆ ಮೂಲೆಗೂ ತಲುಪಿಸಲು ಸಾಧ್ಯವಾಗುತ್ತಿದೆ
* ಸಣ್ಣ ರೈತರು ದೇಶದ ಶಕ್ತಿಯಾಗಬೇಕಿದೆ.. ಕೇಂದ್ರ ಸರ್ಕಾರ ಸಣ್ಣ ರೈತರ ಆದಾಯ ಹೆಚ್ಚಿಸಲಿದೆ
* 2.25 ಕೋಟಿ ಲಕ್ಷ ರೂಪಾಯಿ ದೇಶದ ರೈತರ ಬ್ಯಾಂಕ್ ಖಾತೆಗೆ ಸಂದಾಯವಾಗಿದೆ.. ಸಣ್ಣ ರೈತರು ಈ ದೇಶದ ಹೆಮ್ಮೆ
* 10 ಕೋಟಿಗೂ ಅಧಿಕ ರೈತರಿಗೆ ಈ ಯೋಜನೆಯಿಂದ ಅನುಕೂಲ ಆಗಿದೆ
* ಹಳ್ಳಿಗಳಲ್ಲಿ ಪ್ರತಿ ದಾಖಲೆಯನ್ನು ಡಿಜಟಲೀಕರಣ ಮಾಡಲಾಗುತ್ತಿದ್ದು.. ಇದರಿಂದ ಭೂ ವ್ಯಾಜ್ಯಗಳು ಕಡಿಮೆ ಆಗಲಿದೆ
* ಬೆಂಬಲ ಬೆಲೆ, ವಿಮಾ ಯೋಜನೆ, ಸೌರ ಶಕ್ತಿ ಯೋಜನೆಗಳ ಮೂಲಕ ಬೆಂಬಲ ನೀಡಲಾಗುತ್ತಿದೆ
* ಒಂದೇ ಮಾತರಂ ಮೂಲಕ ದೇಶದ ಮೂಲೆ ಮೂಲೆಗೂ ರೈಲು ಸಂಪರ್ಕ ನೀಡಲಾಗುತ್ತಿದೆ
* ದೇಶದಲ್ಲಿ ಹೊಸ ವಿಮಾಣ ನಿಲ್ದಾಣಗಳ ನಿರ್ಮಾಣ ಮಾಡಲಾಗುತ್ತಿದೆ
* ದೇಶದಲ್ಲಿ 75 ವಂದೇ ಮಾತರಂ ರೈಲು ಸಂಚಾರ ಮಾಡಬೇಕಿದೆ
* ಆಜಾದಿ ಕಾ ಅಮೃತ್ ಮಹೋತ್ಸವ 2023ರವರೆಗೂ ಮುಂದುವರಿಯಲಿದೆ
* 100 ಲಕ್ಷ ಕೋಟಿ ಯೋಜನೆ ಮೂಲಕ ಉದ್ಯೋಗ ಸೃಷ್ಟಿ ಮಾಡಲಿದ್ದೇವೆ
* ಪ್ರಧಾನ ಮಂತ್ರಿ ಗತಿ ಮಿಷನ್.. ಈ ಯೋಜನೆಯ ಮೂಲಕ ಮಾಸ್ಟರ್ ಪ್ಲ್ಯಾನ್ ಮಾಡಲಾಗುತ್ತಿದೆ. ಯೋಜನೆಗೆ ಶೀಘ್ರವೇ ಜಾರಿ ಮಾಡಲಾಗುತ್ತದೆ
* ಭಾರತದ ಸ್ವಯಂ ಜಲಂತರ್ಗಾಮಿ, ಫೈಟರ್ ಜೆಟ್ ನಿರ್ಮಾಣ ಮಾಡಲಾಗಿದೆ.. ಅಂತರಿಕ್ಷದಲ್ಲಿ ಭಾರತದ ಧ್ವಜ ಹರಿಸಲು ಸಿದ್ಧರಾಗಿದ್ದೇವೆ
* ಉತ್ತಮ ಉತ್ಪನ್ನಗಳ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ದೃಢವಾಗಿ ನಿಲ್ಲಬೇಕು.. ಸ್ಪರ್ಧೆ ಮಾಡಬೇಕು.
* ಭಾರತ 3 ಬಿಲಿಯನ್ ಮೊಬೈಲ್ಗಳನ್ನು ಉತ್ಪಾದಿಸಿ ರಫ್ತು ಮಾಡಿದೆ.. ನಮ್ಮ ಉತ್ಪಾದನಾ ವಲಯ ವೇಗ ಪಡೆದುಕೊಳ್ಳುತ್ತಿದೆ
* ಪ್ರತಿಯೊಂದು ಉತ್ಪನ್ನ ಭಾರತದ ಬ್ರ್ಯಾಂಡ್ ಆಗಲಿದೆ.. ಕೊರೊನಾ ಕಾಲದಲ್ಲೂ ಸಾಕಷ್ಟು ಸಾರ್ಟ್ ಅಪ್ಗಳು ಬಂದಿದೆ
* ಸ್ಟಾರ್ಟ್ ಅಪ್ಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡಲಾಗುವುದು
* ಆರ್ಥಿಕ ಅಭಿವೃದ್ಧಿಗೆ ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ.. ಭಾರತದ ಉತ್ಪಾದಕರ ಜೊತೆ ಇದೆ
* ಬೇಡ ಕಾನೂನುಗಳನ್ನು ತೆಗೆದು ಹಾಕುತ್ತೇವೆ.. ಈಗಾಗಲೇ 15 ಸಾವಿರ ಕಾನೂನುಗಳನ್ನು ತೆಗೆದು ಹಾಕಲಾಗಿದೆ
* 200 ವರ್ಷಗಳ ಹಿಂದೆ ದೇಶದಲ್ಲಿ ಒಂದು ಕಾನೂನು ಇತ್ತು.. ಆದ ನಮ್ಮ ದೇಶದಲ್ಲಿ ನಕ್ಷೆ ಮಾಡುವ ಅಧಿಕಾರ ಇರಲಿಲ್ಲ. ಈಗ ಎಲ್ಲರ ನಕಾಶೆ ಜನರ ಕೈಯಲ್ಲೇ ಇರುತ್ತದೆ
PublicNext
15/08/2021 07:21 am