ಚಿತ್ರದುರ್ಗ : ಲಾಕ್ ಡೌನ್ ಕಾರಣಕ್ಕೆ ಮಾರುಕಟ್ಟೆ ಇಲ್ಲದೆಯೇ ತೀವ್ರ ತೋಂದರೆಗೆ ಒಳಗಾದ ಜಿಲ್ಲೆಯ 6435 ರೈತರಿಗೆ ಕೋವಿಡ್ ಪರಿಹಾರ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ರೂ.34361119/- ಹಣ ಜಮೆ ಮಾಡಲಾಗಿದೆ. ಕೊರೊನಾ ಲಾಕ್ ಡೌನ್‌ನಿಂದಾಗಿ ದೂರದ ನಗರಗಳಿಗೆ ಸಾಗಾಟ ಹಾಗೂ ಸೂಕ್ತ ಮಾರುಕಟ್ಟೆ ಸಮಸ್ಯೆಯಿಂದಾಗಿ ನಷ್ಟ ಅನುಭವಿಸಿದ್ದ ಜಿಲ್ಲೆಯ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರನ್ನು ಗುರುತಿಸಿ ಜಿಲ್ಲೆಯ ಸಾವಿರಾರು ರೈತರಿಗೆ ಪರಿಹಾರ ನೀಡಲಾಗಿದೆ.
ಮಧ್ಯ ಕರ್ನಾಟಕದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಬೆಳೆಯಲಾಗುತ್ತದೆ. ಸಣ್ಣ, ಅತಿ ಸಣ್ಣ ರೈತರು ಅಧಿಕ ಸಂಖ್ಯೆಯಲ್ಲಿದ್ದು, ಜಿಲ್ಲೆಯಲ್ಲಿ ಚೆಂಡು, ಕನಕಾಂಬರ, ದುಂಡು ಮಲ್ಲಿಗೆ, ಸುಗಂಧರಾಜ, ಗುಲಾಬಿ, ಬಣ್ಣದ ಸೇವಂತಿಗೆ ಸೇರಿದಂತೆ ಮತ್ತಿತರ ಹೂವುಗಳನ್ನು ಬೆಳೆಯುತ್ತಾರೆ. ಲಾಕ್‌ಡೌನ್‌ನಿಂದಾಗಿ ಪುಷ್ಪ ಬೆಳೆಗಾರರಿಗೆ ಸಮಸ್ಯೆಯಾಗಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಪುಷ್ಪ ಬೆಳೆಗಾರರ ಸಮಸ್ಯೆ ಅರಿತ ರಾಜ್ಯ ಸರ್ಕಾರ ಪರಿಹಾರ ಘೋಷಿಸಲಾಗಿತ್ತು.
ಜಿಲ್ಲೆಯಲ್ಲಿ ಇರುವ ಹೂವು ಬೆಳೆಗಾರರ ಪೈಕಿ ನಷ್ಟ ಅನುಭವಿಸಿದ 2925 ಕೃಷಿಕರ ಖಾತೆಗೆ ಒಟ್ಟು ರೂ.11421751/- ಹಣ ನೇರವಾಗಿ ಜಮೆ ಆಗಿದೆ.
ಮೊಳಕಾಲ್ಮುರು ತಾಲ್ಲೂಕಿನ 241 ಫಲಾನುಭವಿಗಳಿಗೆ ರೂ.859927 ಪರಿಹಾರ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಚಳ್ಳಕೆರೆ ತಾಲ್ಲೂಕಿನ 789 ಫಲಾನುಭವಿಗಳಿಗೆ ರೂ.3265264/-, ಚಿತ್ರದುರ್ಗ ತಾಲ್ಲೂಕಿನ 346 ಫಲಾನುಭವಿಗಳಿಗೆ ರೂ.1143644/-, ಹೊಳಲ್ಕೆರೆ ತಾಲ್ಲೂಕಿನ 149 ಫಲಾನುಭವಿಗಳಿಗೆ ರೂ.5917001/-, ಹೊಸದುರ್ಗ ತಾಲ್ಲೂಕಿನ 286 ಫಲಾನುಭವಿಗಳಿಗೆ ರೂ.1178511/- ಹಾಗೂ ಹಿರಿಯೂರು ತಾಲ್ಲೂಕಿನ 1114 ಫಲಾನುಭವಿಗಳಿಗೆ ರೂ.4382704/- ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕುಗಳಿಂದ ಜಿಲ್ಲೆಯ 2925 ಫಲಾನುಭವಿಗಳಿಗೆ ಒಟ್ಟು ರೂ.11421751/- ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಹಣ್ಣು ಮತ್ತು ತರಕಾರಿ ಬೆಳೆಗಾರರು: ಜಿಲ್ಲೆಯಲ್ಲಿ ಕಲ್ಲಂಗಡಿ, ಪಪ್ಪಾಯ, ಕರಬೂಜ, ಅಂಜೂರ ಹಾಗೂ ಬೆಳೆಯನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗಿತ್ತು.
ತರಕಾರಿ ಬೆಳೆಗಳಾದ ಟೊಮೊಟೊ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯಲಾಗಿತ್ತು. ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಮಾರುಕಟ್ಟೆಗೆ ಸಮಸ್ಯೆಯಾಗಿತ್ತು. ಇದರಿಂದ ಹಣ್ಣು ಮತ್ತು ತರಕಾರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು.
ಜಿಲ್ಲೆಯ 595 ಹಣ್ಣು ಬೆಳೆಗಾರರಿಗೆ ರೂ.4559281/-ಗಳನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ 47 ಫಲಾನುಭವಿಗಳಿಗೆ ರೂ.376450/-, ಚಳ್ಳಕೆರೆ ತಾಲ್ಲೂಕಿನ 261 ಫಲಾನುಭವಿಗಳಿಗೆ ರೂ.2167153/-, ಚಿತ್ರದುರ್ಗ ತಾಲ್ಲೂಕಿನ 35 ಫಲಾನುಭವಿಗಳಿಗೆ ರೂ. 246300/-, ಹೊಳಲ್ಕೆರೆ ತಾಲ್ಲೂಕಿನ 25 ಫಲಾನುಭವಿಗಳಿಗೆ ರೂ.149000/-, ಹೊಸದುರ್ಗ ತಾಲ್ಲೂಕಿನ 58 ಫಲಾನುಭವಿಗಳಿಗೆ ರೂ.333450/- ಹಾಗೂ ಹಿರಿಯೂರು ತಾಲ್ಲೂಕಿನ 169 ಫಲಾನುಭವಿಗಳಿಗೆ ರೂ.1286928/- ಮೊತ್ತ ಸೇರಿದಂತೆ ಜಿಲ್ಲೆಯ ಒಟ್ಟು 595 ಫಲಾನುಭವಿಗಳಿಗೆ ರೂ.4559281/- ಮೊತ್ತ ನೇರವಾಗಿ ನೇರವಾಗಿ ರೈತರ ಖಾತೆಗೆ ಜಮೆಆಗಿದೆ.
ಜಿಲ್ಲೆಯ 2915 ತರಕಾರಿ ಬೆಳೆಗಾರರಿಗೆ ಒಟ್ಟು ರೂ.18380087/-ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.
ಜಿಲ್ಲೆಯ 2975 ಹೂ ಬೆಳೆಗಾರರಿಗೆ ರೂ.11421751/-, 595 ಹಣ್ಣ ಬೆಳೆಗಾರರಿಗೆ ರೂ.4559281/- ಹಾಗೂ 2915 ತರಕಾರಿ ಬೆಳೆಗಾರರಿಗೆ ರೂ.18380087/- ಸೇರಿದಂತೆ ಹೂ, ಹಣ್ಣು ಮತ್ತು ತರಕಾರಿ ಬೆಳೆದ ಒಟ್ಟು 6435 ಫಲಾನುಭವಿಗಳಿಗೆ ಒಟ್ಟು ರೂ.34361119/- ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
PublicNext
28/07/2021 07:12 pm