ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇದರಿಂದಾಗಿ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಹೀಗಾಗಿ ಬೆಲೆ ತಗ್ಗಿಸಲು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವು ಮುಂದಾಗಿದೆ.
ದೇಶದಲ್ಲಿ ಇಂಧನ ಬೆಲೆಗಳು ಏರುಗತಿಯಲ್ಲಿರುವುದಕ್ಕೆ ಒಪೆಕ್ OPEC (Organisation of the Petroleum Exporting Countries) ರಾಷ್ಟ್ರಗಳು ದುರಾಸೆಯಿಂದ ಉತ್ಪಾದನೆ ಕಡಿಮೆ ಮಾಡಿರುವುದೇ ಕಾರಣ ಎಂದು ಕೇಂದ್ರ ಸರಕಾರ ಭಾನುವಾರ ಆರೋಪಿಸಿದೆ. ಹೀಗಾಗಿ ರಷ್ಯಾ ಸೇರಿದಂತೆ ಒಪೆಕ್ ರಾಷ್ಟ್ರಗಳಿಗೆ ಹಾಗೂ ಅದರ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿರುವ ಭಾರತ ಕೂಡಲೇ ತೈಲ ಉತ್ಪಾದನೆಯನ್ನು ತೀವ್ರಗೊಳಿಸುವಂತೆ ಕೇಳಿಕೊಂಡಿದೆ.
ಇದರೊಂದಿಗೆ ಒಪೆಕ್ ರಾಷ್ಟ್ರಗಳಿಗಿಂತಲೂ ಕಡಿಮೆ ದರದಲ್ಲಿ ಇರಾನ್ ಮತ್ತು ವೆನಿಜುವೆಲಾದಿಂದ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಧರ್ಮೆಂದ್ರ ಪ್ರಧಾನ್ ಅವರು, ''ಬೆಲೆ ಏರಿಕೆಗೆ ಅವರು ಪ್ರಮುಖ ಎರಡು ಕಾರಣಗಳನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನವನ್ನು ಕಡಿತಗೊಳಿಸಲಾಗಿದೆ ಹಾಗೂ ತೈಲ ಉತ್ಪಾದಿಸುವ ದೇಶಗಳು ಹೆಚ್ಚು ಲಾಭ ಗಳಿಸಲು ಕಡಿಮೆ ತೈಲ ಉತ್ಪಾದನೆಯೆಡೆ ಗಮನ ಕೊಟ್ಟಿವೆ. ಹೀಗಾಗಿ ಪೆಟ್ರೋಲ್, ಡಿಸೇಲ್ ಬೆಲೆ ನಮ್ಮಂತಹ ಬಳಕೆ ರಾಷ್ಟ್ರಗಳಲ್ಲಿ ಹೆಚ್ಚಿದೆ ಎಂದು ತಿಳಿಸಿದ್ದಾರೆ.
PublicNext
22/02/2021 05:50 pm