ಬೆಳಗಾವಿ: ತಾಲೂಕಿನ ಮಚ್ಛೆ ಬಳಿ ಪ್ರತಿಭಟನೆ ನಡೆಯುತ್ತಿದ್ದು, ತಲೆ ಮೇಲೆ ಕಲ್ಲು ಇಟ್ಟುಕೊಂಡು ರೈತರು ಹಾಗೂ ಅವರ ಮಕ್ಕಳು ಹೋರಾಟ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಬೈಪಾಸ್ ರಸ್ತೆ ಕಾಮಗಾರಿ ಆರಂಭಿಸಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಮೂಲ ಕಾಮಗಾರಿ ಬಿಟ್ಟು ಬೇರೆ ಮಾರ್ಗದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಲಗಾ ಗ್ರಾಮದಿಂದ ಮಚ್ಛೆವರೆಗೂ 9.5 ಕಿಮೀ ಬೈಪಾಸ್ ರಸ್ತೆ ಕಾಮಗಾರಿಗೆ ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ರೈತರ ಸುಮಾರು 175 ಎಕರೆ ಜಮೀನು ಸ್ವಾಧೀನ ಪಡೆಸಿಕೊಳ್ಳಲಾಗಿದೆ. ಶೇಕಡ 75ರಷ್ಟು ರೈತರಿಗೆ ಪರಿಹಾರ ನೀಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಯಾವುದೇ ರೈತರಿಗೆ ಪರಿಹಾರ ನೀಡಿಲ್ಲ. ಪರಿಹಾರ ನೀಡಿದ ರೈತರನ್ನು ಕರೆತಂದು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಎಲ್ಲಿಂದ ಕಾಮಗಾರಿ ಆರಂಭಿಸಬೇಕೆಂದು ನಿಗದಿ ಆಗುವವರೆಗೂ ಕಾಮಗಾರಿ ಆರಂಭಿಸದಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೂ ಕಾನೂನು ಬಾಹಿರವಾಗಿ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ರೈತ ರಾಜು ಮರ್ವೆ ಆರೋಪಿಸಿದ್ದಾರೆ.
PublicNext
11/02/2021 07:22 pm