ನವದೆಹಲಿ: ವಾಹನ ಚಲಾಯಿಸುವವರು ಡ್ರೈವಿಂಗ್ ಲೈಸೆನ್ಸ್ ಪಡೆಬೇಕಾದರೆ ಡ್ರೈವಿಂಗ್ ಟೆಸ್ಟ್ ಸಹ ತುಂಬಾ ಮುಖ್ಯವಾಗಿತ್ತು.
ಈಗ ಡಿಎಲ್ ಅನ್ನು ಸರ್ಕಾರಿ ದರದಲ್ಲೇ ಸುಲಭವಾಗಿ ಪಡೆಯುವುದು ಹೇಗೆ? ಎಂಬ ಪ್ರಶ್ನೆ ಅನೇಕರಲ್ಲಿ ಕಾಡುತ್ತಿದೆ. ಇನ್ನು ಮುಂದೆ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಅದಕ್ಕಾಗಿ ಹೊಸ ಕಾರ್ಯಯೋಜನೆಯೊಂದು ತಯಾರಾಗುತ್ತಿದೆ. ಡ್ರೈವಿಂಗ್ ಟೆಸ್ಟ್ ಇಲ್ಲದೆಯೇ ಸುಲಭವಾಗಿ ಡಿಎಲ್ ಪಡೆಯಬಹುದಾಗಿದೆ.
ಹೌದು. ದೇಶದಲ್ಲಿ ರಸ್ತೆ ಅಪಘಾತಗಳನ್ನು ತಗ್ಗಿಸಲು ನಾಗರಿಕರಿಗೆ ಉತ್ತಮ ಗುಣಮಟ್ಟದ ಡ್ರೈವಿಂಗ್ ತರಬೇತಿ ನೀಡುವ ಸಲುವಾಗಿ ಕೇಂದ್ರಾಡಳಿತ ಪ್ರದೇಶದ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಡ್ರೈವಿಂಗ್ ತರಬೇತಿ ಕೇಂದ್ರಗಳಿಗೆ ಮಾನ್ಯತೆ ಪ್ರಮಾಣಪತ್ರಗಳನ್ನು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷದ ಅಂತ್ಯದಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ತರಬೇತಿ ಕೇಂದ್ರಗಳಲ್ಲಿ ಯಶಸ್ವಿ ತರಬೇತಿ ಪಡೆಯುವ ಚಾಲಕರು ಡ್ರೈವಿಂಗ್ ಲೈಸೆನ್ಸ್ ಪಡೆಯುವಾಗ ಎದುರಿಸಬೇಕಾದ ಡ್ರೈವಿಂಗ್ ಟೆಸ್ಟ್ ನಿಂದ ವಿನಾಯಿತಿಯನ್ನು ಪಡೆದುಕೊಳ್ಳಲಿದ್ದಾರೆ. ಕೆಲವೊಂದು ಗುಣಮಟ್ಟಗಳನ್ನು ತರಬೇತಿ ಪಡೆಯುವ ಚಾಲಕರು ಸಾಧಿಸಿದ ಬಳಿಕ ತರಬೇತಿ ಕೇಂದ್ರಗಳು ಪ್ರಮಾಣಪತ್ರಗಳನ್ನು ನೀಡಲಿವೆ.
PublicNext
06/02/2021 09:52 am