ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೌರಕಾರ್ಮಿಕರಿಗೆ ಸಿಹಿ ಸುದ್ದಿ ಕೊಟ್ಟ ಬಿಬಿಎಂಪಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರಕಾರ್ಮಿಕರಿಗೆ ಬಿಬಿಎಂಪಿ ಸಿಹಿ ಸುದ್ದಿ ಕೊಟ್ಟಿದೆ.

ಹೌದು, ಈವರೆಗೂ ಪೌರಕಾರ್ಮಿಕರಿಗೆ ಬುಧವಾರ ಅರ್ಧ ದಿನ ಹಾಗೂ ಭಾನುವಾರ ಅರ್ಧ ದಿನ ಸೇರಿಸಿ ವಾರಕ್ಕೆ ಒಂದು ದಿನ ರಜೆ ಸಿಗುತ್ತಿತ್ತು. ಅದರ ಹೊರತಾಗಿ ಎಲ್ಲಾ ಹಬ್ಬ ಹರಿದಿನಗಳಲ್ಲೂ ಕೆಲಸ ಮಾಡಬೇಕಿತ್ತು. ಆದರೆ ಈಗ ಎಲ್ಲಾ ರಾಷ್ಟ್ರೀಯ ರಜೆಗಳನ್ನು ಸರ್ಕಾರಿ ನೌಕರರಿಗೆ ಕೊಡುವ ರೀತಿಯಲ್ಲಿ ಪೌರಕಾರ್ಮಿಕರಿಗೂ ಕೊಡುವುದಕ್ಕೆ ಬಿಬಿಎಂಪಿ ಮುಂದಾಗಿದೆ.

ಹಬ್ಬಗಳು ಬಂತು ಅಂದ್ರೆ ಪೌರಕಾರ್ಮಿಕರ ಗೋಳು ಕೇಳುವವರೆ ಇರುತ್ತಿರಲಿಲ್ಲ. ಈ ಬಗ್ಗೆ ಹಲವು ಸಭೆಗಳು ಹಾಗೂ ಧರಣಿಗಳನ್ನು ಪೌರಕಾರ್ಮಿಕರು ಮಾಡಿದ್ದರು. ಈ ಹಿನ್ನೆಲೆ ಕಾರ್ಮಿಕ‌ ಇಲಾಖೆಯ ಸಲಹೆಯ ಮೇರೆಗೆ ಬಿಬಿಎಂಪಿ ವರ್ಷದಲ್ಲಿ ಬರುವ ಎಲ್ಲಾ ಹಬ್ಬಗಳಿಗೆ ಮೀಸಲಿರುವ ಸರ್ಕಾರಿ ರಜೆಗಳನ್ನು ನೀಡಲು ಮುಂದಾಗಿದೆ.

Edited By : Vijay Kumar
PublicNext

PublicNext

21/01/2021 06:00 pm

Cinque Terre

35.7 K

Cinque Terre

0