ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ 'ಕಾವೇರಿ ಎಂಪೋರಿಯಂ' ಕರಕುಶಲ ವಸ್ತುಗಳು ಆನ್​ಲೈನ್‌ನಲ್ಲಿ ಲಭ್ಯ: ಡಿ.ರೂಪಾ

ಬೆಂಗಳೂರು: ಇನ್ಮುಂದೆ ಕಾವೇರಿ ಎಂಪೋರಿಯಂ ಕರಕುಶಲ ವಸ್ತುಗಳು ಆನ್​ಲೈನ್‌ನಲ್ಲಿ ಲಭ್ಯವಾಗಲಿವೆ.

ಹೌದು. ಹೊಸದಾಗಿ ನೇಮಕಗೊಂಡ ಕೆಎಸ್‌ಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಈ ಘೋಷಣೆ ಮಾಡಿದ್ದಾರೆ. ಹೆಚ್ಚಿನ ಗ್ರಾಹಕರನ್ನು ತಲುಪಲು ಮತ್ತು ಸ್ಥಳೀಯ ಕರಕುಶಲ ಕಾರ್ಮಿಕರನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಎಸ್‌ಎಚ್‌ಡಿಸಿ) ತನ್ನ ಉತ್ಪನ್ನಗಳನ್ನು ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಮಾರಾಟ ಮಾಡಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಡಿ.ರೂಪಾ, ''ಕೆಎಸ್‌ಎಚ್‌ಡಿಸಿ ಕರ್ನಾಟಕ ಸರ್ಕಾರದ ಸಂಸ್ಥೆಯಾಗಿದ್ದು, ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ನಡೆಸುತ್ತಿದೆ. ಕಾವೇರಿ ಎಂಪೋರಿಯಂನ 100 ಉತ್ಪನ್ನಗಳು ಶೀಘ್ರವೇ ಆನ್‌ಲೈನ್ ಖರೀದಿಗೆ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಕರಕುಶಲ ವಸ್ತುಗಳು ಸಿಗಲಿವೆ. ನಾವು 30 ವಸ್ತುಗಳನ್ನು ಪಟ್ಟಿ ಮಾಡಿದ್ದೇವೆ. 70 ವಸ್ತುಗಳನ್ನು ಇನ್ನೂ ಪಟ್ಟಿ ಮಾಡಬೇಕಿದೆ. ಶೀಘ್ರದಲ್ಲೇ ನಾವು ಇತರ ಇ-ಪ್ಲಾಟ್‌ಫಾರ್ಮ್‌ಗಳಲ್ಲಿ ಸೇವೆ ನೀಡುತ್ತೇವೆ'' ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

10/01/2021 03:05 pm

Cinque Terre

27.89 K

Cinque Terre

0

ಸಂಬಂಧಿತ ಸುದ್ದಿ