ಕೊಪ್ಪಳ: ರಾಜ್ಯದ ಅರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣದಿಂದಾಗಿ ನಿರೀಕ್ಷೆಯಂತೆ ನಾವು ಯಾವ ಕೆಲಸವನ್ನು ಮಾಡಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಕನೂರು ತಾಲೂಕಿನ ಭಾನಾಪೂರ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಆಟಿಕೆ ಕ್ಲಸ್ಟರ್ ಭೂಮಿ ಪೂಜೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೋವಿಡ್, ಅತಿವೃಷ್ಟಿ, ಬರಗಾಲದಿಂದ ಈ ಬಾರಿ ಸಾಕಷ್ಟು ತೊಂದರೆಗಳಾಗಿವೆ ಎಂದಿದ್ದಾರೆ.
ದೇಶದಲ್ಲಿ ಮೊದಲ ಟಾಯ್ಸ್ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡ್ತಿದ್ದೇವೆ. ಕೆಲಸ ಆರಂಭ ಆದ ಬಳಿಕ ಪ್ರಧಾನಿ ಮೋದಿ ಕರೆಸಿ ಉದ್ಘಾಟನೆ ಮಾಡಬೇಕೆಂಬ ಅಪೇಕ್ಷೆ ಇದೆ ಎಂದರು.
ಟಾಯ್ಸ್ ಕ್ಲಸ್ಟರ್ ಗೆ ಭೂಮಿ ಪೂಜೆ ಮಾಡುವ ಮೂಲಕವಾಗಿ ಕೃಷಿ ಸಂಜೀವಿನಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
PublicNext
09/01/2021 02:51 pm