ಬೆಂಗಳೂರು: ಮುಖ್ಯ ಕಾರ್ಯದರ್ಶಿ ತ.ಮ. ವಿಜಯ ಭಾಸ್ಕರ್ ಅವರು ಈ ತಿಂಗಳ ಕೊನೆಗೆ ನಿವೃತ್ತರಾಗಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಪಿ.ರವಿಕುಮಾರ್ ಅವರು ಮುಂದಿನ ಮುಖ್ಯ ಕಾರ್ಯದರ್ಶಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಸದ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ 1984 ಬ್ಯಾಚ್ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ, ಪಿ. ರವಿಕುಮಾರ್ ಹಿರಿಯರು. ಒಂದೊಮ್ಮೆ ರವಿಕುಮಾರ್ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ಅವರು ಒಂದೂವರೆ ವರ್ಷದ ಅಧಿಕಾರಾವಧಿಯನ್ನು ಹೊಂದಿರುತ್ತಾರೆ.
ರವಿಕುಮಾರ್ ಅವರೊಂದಿಗೆ ಕೆಲಸ ಮಾಡುವ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, 'ರವಿಕುಮಾರ್ ಅವರ ಕಾರ್ಯ ವೈಖರಿ ಸ್ವಲ್ಪ ಬೇರೆ. ಅವರು ಕೆಲಸವನ್ನು ಬೇರೆ ರೀತಿ ಮಾಡಲು ಪ್ರಯತ್ನ ಮಾಡುತ್ತಾರೆ ಮತ್ತು ದೊಡ್ಡ ಮೂಲಭೂತ ಯೋಜನೆಗಳನ್ನು ಅವರು ಜಾರಿಗೆ ತರುವ ಸಾಧ್ಯತೆ ಹೆಚ್ಚು' ಎಂದು ಹೇಳಿದ್ದಾರೆ.
PublicNext
29/12/2020 08:12 pm