ತುಮಕೂರು: ತಾನಾಗಿಯೇ ಬಂದಿದ್ದು ಅಮೃತಕ್ಕೆ ಸಮಾನ. ಕೇಳಿ ಪಡೆದರೆ ವಿಷಕ್ಕೆ ಸಮಾನ ಎಂದು ತುಮಕೂರು ಸಿದ್ಧಗಂಗಾ ಮಠದ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಲಿಂಗೈಕ್ಯ ಡಾ ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಕೂಗು ಅವರು ಅಗಲಿದಾಗಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ಧಲಿಂಗ ಶ್ರೀಗಳು, ‘ಭಾರತ ರತ್ನ ಕೊಡುವಂತೆ ಯಾರೂ ಕೇಳಬಾರದು. ನಾವೂ ಕೇಳುವುದಿಲ್ಲ. ಈ ಬಗ್ಗೆ ಚರ್ಚೆ ಅನಗತ್ಯ. ಇದನ್ನು ಯಾರೂ ಮೀರಬಾರದು. ಪ್ರಶಸ್ತಿ ಬಂದ ತಕ್ಷಣ ಯಾರ ಗೌರವವೂ ಹೆಚ್ಚಾಗುವುದಿಲ್ಲ’ ಎಂದು ತಿಳಿಸಿದ್ದಾರೆ.
ಇನ್ನು ಏಪ್ರಿಲ್ 1ರಂದು ಮಠದಲ್ಲಿ ನಡೆಯುವ ಶಿವಕುಮಾರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ.
PublicNext
29/03/2022 09:40 pm