ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪಡೆಯದೇ ಪೀಠಕ್ಕೆ ಮರಳುವುದಿಲ್ಲ'

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೋರಿ ನಡೆಯುತ್ತಿರುವ ಹೋರಾಟ ಮತ್ತಷ್ಟು ಚುರುಕುಗೊಂಡಿದೆ. ಈ ಮಧ್ಯೆ ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ಪಡೆಯದೇ ಪೀಠಕ್ಕೆ ಮರಳುವುದಿಲ್ಲ ಎಂದು ಘೋಷಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮುದಾಯದ ಬೃಹತ್‌ ಸಮಾವೇಶದಲ್ಲಿ ಸಮಾಜದ ಹಕ್ಕೊತ್ತಾಯದ ನುಡಿಗಳನ್ನಾಡಿದ ಅವರು, ''ಮೀಸಲಾತಿಗಾಗಿ ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿ ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಇದುವರೆಗೆ ಹಲವಾರು ಸಮುದಾಯದವರು ಇಲ್ಲಿ ಸಮಾವೇಶ ಮಾಡಿ ಮಾಡಿರಬಹುದು. ಆದರೆ ನಾವು ಕರೆ ಕೊಟ್ಟರೆ ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಬಹುದು. ಸಮಾವೇಶದ ನಂತರ ವಿಧಾನಸೌದದ ಎದುರು ಮಾರ್ಚ್‌ 4ರ ವರೆಗೂ ಧರಣಿ ನಡೆಸಲಾಗುವುದು. ಆಗಲೂ ಸರ್ಕಾರ ಮೀಸಲಾತಿ ಆದೇಶ ನೀಡದಿದ್ದರೆ, ಮಾರ್ಚ್‌ 5ರಿಂದ ಅಮರಣಾಂತ ಉಪವಾಸ ನಡೆಸಲಾಗುವುದು'' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

21/02/2021 10:33 pm

Cinque Terre

73.72 K

Cinque Terre

15

ಸಂಬಂಧಿತ ಸುದ್ದಿ