ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಜರಾಯಿ ದೇವಸ್ಥಾನಗಳಲ್ಲಿ ಎಲ್ಲ ಧಾರ್ಮಿಕ ಆಚರಣೆಗಳಿಗೆ ಇಲಾಖೆ ಅಸ್ತು

ಬೆಂಗಳೂರು: ಮುಜರಾಯಿ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ನಡೆಯುವ ಸೇವೆಗಳಿಗೆ ಇಲಾಖೆ ಅಸ್ತು ಎಂದಿದೆ.

ಮುಜರಾಯಿ ಇಲಾಖೆಯ ಈ ನಿರ್ಧಾರದಿಂದ ದೇವಸ್ಥಾನಗಳಲ್ಲಿ ಜಾತ್ರೆ ಮತ್ತು ರಥೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಆಚರಣೆಗಳಿಗೆ ಅನುಮತಿ ಸಿಕ್ಕಂತಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ಈ ಕುರಿತು ಆದೇಶ ಪ್ರಕಟವಾಗಿದೆ. ಈ ಬಗ್ಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕೊರೊನಾ ಮಾರ್ಗಸೂಚಿ ಪಾಲಿಸುವ ಷರತ್ತು ಒಳಪಟ್ಟು ಆಯಾ ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಆಚರಣೆಗೆ ಅವಕಾಶ ನೀಡಲಾಗಿದೆ. ಈ ಮೂಲಕ ದೇವಸ್ಥಾನಗಳಲ್ಲಿನ ಸೇವೆಗಳು, ಜಾತ್ರೆ ಉತ್ಸವ ಪ್ರಕ್ರಿಯೆ, ಬ್ರಹ್ಮ ರಥೋತ್ಸವ, ಪ್ರಸಾದ ವಿತರಣೆ, ಅನ್ನ ದಾಸೋಹ ಮತ್ತು ಇತರೆ ಪೂಜಾ ಕೈಂಕರ್ಯಗಳನ್ನು ನಡೆಸಲು ಗ್ರೀನ್‌ ಸಿಗ್ನಲ್ ದೊರೆತಿದೆ.

Edited By : Vijay Kumar
PublicNext

PublicNext

09/02/2021 10:09 pm

Cinque Terre

76.35 K

Cinque Terre

5

ಸಂಬಂಧಿತ ಸುದ್ದಿ