ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ 19 ಆತಂಕದ ನಡುವೆ ಇಂದಿನಿಂದ ವಿಧನ ಮಂಡಲ ಅಧಿವೇಶನ ಶುರು

ಬೆಂಗಳೂರು: ಕೋವಿಡ್ 19 ಆತಂಕದ ನಡುವೆ ಸೋಮವಾರ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಸರಕಾರವು ಸಾಕಷ್ಟು ಮುಂಜಾಗ್ರತೆ ಕೈಗೊಂಡಿದೆ.

ಡಿಸಿಎಂ ಡಾ| ಅಶ್ವತ್ಥನಾರಾಯಣ ಮತ್ತು ಸಚಿವರಾದ ಬಸವರಾಜ ಬೊಮ್ಮಾಯಿ, ಬೈರತಿ ಬಸವರಾಜ್, ಕೆ. ಗೋಪಾಲಯ್ಯ, ಸಚಿವ ಪ್ರಭು ಚವ್ಹಾಣ್ ಕೋವಿಡ್ 19 ಸೋಂಕಿನಿಂದ ಹೋಮ್ ಕ್ವಾರಂಟೈನ್ ಆಗಿದ್ದಾರೆ.

ಸುಮಾರು 70 ಶಾಸಕರಿಗೆ ಕೋವಿಡ್ 19 ಸೋಂಕು ತಗಲಿದೆ ಎಂಬ ಮಾಹಿತಿಯಿದೆ.

ವಿಧಾನ ಸಭೆಯ ಹಾಲ್ ನಲ್ಲಿ 300 ಆಸನಗಳಿದ್ದು, 269 ಆಸನಗಳಿಗೆ ಮೈಕ್ ವ್ಯವಸ್ಥೆ ಕಲ್ಪಿಸಲಾಗಿದೆ.

ದಿನವೂ ಸ್ಯಾನಿಟೈಸೇಶನ್, ಶಾಸಕರು-ಸಚಿವರಿಗೆ ಉಷ್ಣಾಂಶ ಪರೀಕ್ಷೆ, ಆಸನಗಳ ಮಧ್ಯೆ ಶೀಲ್ಡ್ , ನಡುವೆ ಅಂತರ, 20 ಅಧಿಕಾರಿಗಳಿಗೆ ಮಾತ್ರ ಹಾಜರಾಗಲು ಅವಕಾಶ ಇತ್ಯಾದಿಯಾಗಿ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಸುಗಮ ಅಧಿವೇಶನಕ್ಕಾಗಿ ಕೈಗೊಳ್ಳಲಾಗಿದೆ.

Edited By : Nirmala Aralikatti
PublicNext

PublicNext

21/09/2020 07:22 am

Cinque Terre

46.02 K

Cinque Terre

0

ಸಂಬಂಧಿತ ಸುದ್ದಿ