ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ 'ಮರವಂತೆ ಬೀಚ್‌'ನ್ನು ಹಾಡಿಹೊಗಳಿದ ನಾರ್ವೆಯ ಮಾಜಿ ರಾಜ ತಾಂತ್ರಿಕ ಅಧಿಕಾರಿ

ನವದೆಹಲಿ: ನಾರ್ವೆಯ ಮಾಜಿ ರಾಜ ತಾಂತ್ರಿಕ ಅಧಿಕಾರಿಯೊಬ್ಬರು ಭಾರತದ ಅದರಲ್ಲೂ ನಮ್ಮ ಕರ್ನಾಟಕದ ಉಡುಪಿ ಜಿಲ್ಲೆಯ ಮರವಂತೆಯ ಬೀಚ್‌ ಫೋಟೋವನ್ನು ಶೇರ್ ಮಾಡಿ ಹಾಡಿ ಹೊಗಳಿದ್ದಾರೆ.

ಮರವಂತೆಯ ಬೀಚ್‌ಸೈಡ್ ರಸ್ತೆಯ ವೈಮಾನಿಕ ನೋಟವನ್ನು ಟ್ವೀಟ್ ಮಾಡಿರುವ ನಾರ್ವೇ ಮಾಜಿ ರಾಜತಾಂತ್ರಿಕ ಅಧಿಕಾರಿ ಎರಿಕ್ ಸೋಲ್ಹೈಮ್ ಅವರು, 'ಇದು ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗವಿದು' ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್‌ಅನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಲೈಕ್‌ ಮಾಡಿದ್ದಾರೆ. ಆದರೆ ಎರಿಕ್ ಸೋಲ್ಹೈಮ್ ಅವರು ಫೋಟೋದಲ್ಲಿ ನಿರ್ದಿಷ್ಟ ರಸ್ತೆ ಅಥವಾ ಮಾರ್ಗದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಆದರೆ ಇದು ಯಾವ ಸ್ಥಳ ಎಂಬುದನ್ನು ಜನರು ಊಹಿಸಿ ಖುಷಿಯಿಂದ ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಇದು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣದ ಸಮೀಪವಿರುವ ಮರವಂತೆ ಬೀಚ್ ಎಂದು ಹಲವರು ಸರಿಯಾಗಿ ಊಹಿಸಿದ್ದಾರೆ.

ನಾರ್ವೇ ಮಾಜಿ ರಾಜತಾಂತ್ರಿಕ ಅಧಿಕಾರಿಯ ಟ್ವೀಟ್‌ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. 'ಖಂಡಿತವಾಗಿಯೂ ಇದು ಸೈಕ್ಲಿಂಗ್ ಸ್ನೇಹಿ ರಸ್ತೆ ಅಲ್ಲ. ನಾನು ಅನೇಕ ಬಾರಿ ಅಲ್ಲಿಗೆ ಹೋಗಿದ್ದೆ. ಕಾರುಗಳು ಮತ್ತು ಟ್ರಕ್‌ಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಇಲ್ಲಿ ಹೋಗುತ್ತವೆ. ಅಲ್ಲದೆ, ಸೈಕ್ಲಿಂಗ್‌ಗೆ ಮೀಸಲಾದ ಲೈನ್ ಇಲ್ಲಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸೋಲ್ಹೈಮ್ ಹಂಚಿಕೊಂಡ ಚಿತ್ರವನ್ನು ಮೂಲತಃ ಛಾಯಾಗ್ರಾಹಕ ಧೇನೇಶ್ ಅಣ್ಣಾಮಲೈ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆ @aerial_holic ನಲ್ಲಿ ಪೋಸ್ಟ್ ಮಾಡಿದ್ದರು. 'ಮರವಂತೆ ಬೀಚ್ ಎಷ್ಟು ವಿಶಿಷ್ಟವಾಗಿದೆ ಎಂದರೆ ಅದು ಪಶ್ಚಿಮ ಭಾಗದಲ್ಲಿ ಅರಬ್ಬಿ ಸಮುದ್ರ, ಆದರೆ ಪೂರ್ವ ಭಾಗದಲ್ಲಿ ಶಾಂತ ಮತ್ತು ಅದ್ಭುತವಾದ ಸೌಪರ್ಣಿಕಾ ನದಿ ಈ ಎರಡು ಜಲಮೂಲಗಳಿಂದ ಆವೃತವಾಗಿದೆ' ಎಂದು ಬರೆದುಕೊಂಡಿದ್ದರು.

Edited By : Vijay Kumar
PublicNext

PublicNext

20/05/2022 11:12 am

Cinque Terre

52.71 K

Cinque Terre

0

ಸಂಬಂಧಿತ ಸುದ್ದಿ