ಮುಂಬೈ: ಯುದ್ಧ ಪೀಡಿತ ಉಕ್ರೇನ್ ನಲ್ಲಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಆರಂಭವಾದ “ಆಪರೇಷನ್ ಗಂಗಾ” ಯಶಸ್ಸಿಗೆ ಜಾಗತಿಕ ರಂಗದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವವೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೌದು ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿದೆ. ಉಕ್ರೇನ್ ನಲ್ಲಿರುವ ಇತರೆ ದೇಶದ ನಾಗರಿಕರನ್ನು ವಾಪಸ್ ಕರೆತರಲು ಸಾಕಷ್ಟು ಪರದಾಡುತ್ತಿರುವ ಬೆನ್ನಲ್ಲೇ ಭಾರತ “ಆಪರೇಷನ್ ಗಂಗಾ” ಹೆಸರಿನಲ್ಲಿ ತನ್ನ ನಾಗರಿಕರನ್ನು ನಿರಂತರವಾಗಿ ತಾಯ್ನಾಡಿಗೆ ಕರೆತರುವ ಕಾರ್ಯ ಮಾಡುತ್ತಿದೆ ಎಂದರು.
ಪುಣೆಯಲ್ಲಿ ಸಿಂಬಯಾಸಿಸ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಪ್ರಧಾನಿ ಮಾತನಾಡಿದರು.
ಉಕ್ರೇನ್ ನಲ್ಲಿ ಸಿಲುಕಿದ್ದ 13,700 ಭಾರತೀಯರನ್ನು ಸುರಕ್ಷಿತವಾಗಿ ಮನೆಗೆ ಮರಳಿಸಲಾಗಿದೆ ಎಂದು ಭಾರತ ಸರ್ಕಾರ ಶನಿವಾರ ತಿಳಿಸಿದೆ.
PublicNext
06/03/2022 09:54 pm