ಹುಬ್ಬಳ್ಳಿ: ಉಕ್ರೇನ್ ನಲ್ಲಿ ಸಿಲುಕಿದ್ದ ಚೈತ್ರಾ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಉಕ್ರೇನ್ ನಲ್ಲಿ ಸಿಲುಕಿದ್ದ ಚೈತ್ರಾ ಸಂಶಿ ಎನ್ನುವ ವಿದ್ಯಾರ್ಥಿನಿಗೆ ಹೂ ಗುಚ್ಛ ನೀಡಿ ಸಿಎಂ ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು, ಚೈತ್ರಾ ಅಲ್ಲಿ 3 ನೆಯ ವರ್ಷದ ಮೆಡಿಕಲ್ ಓದುತ್ತಿದ್ದಳು. ಬಹಳಷ್ಟು ಜನ ವಿದ್ಯಾರ್ಥಿನಿಯರು ಅಲ್ಲಿ ಸಿಲುಕಿದ್ದರು. ಚೈತ್ರಾ ಅಲ್ಲಿಯ ಬಂಕರ್ ನಲ್ಲಿ ಸಿಲುಕಿದ್ರು. ಅಲ್ಲಿಂದ 4-5 ಕಿಮೀ ರಸ್ತೆಯ ಮೂಲಕ ನಡೆದುಕೊಂಡು ಬಂದಿದ್ದರು. ಅಲ್ಲಿಂದ ರಾಯಭಾರಿ ಸಹ ಬಹಳ ಸಪೋರ್ಟ್ ಮಾಡಿ ಕರೆದುಕೊಂಡು ಬಂದಿದೆ.
ಅವರ ಕುಟುಂಬ ತುಂಬಾನೇ ಭಯಗೊಂಡಿದ್ರು. ಅಂತಹ ಸಮಯದಲ್ಲಿ ಜಿಲ್ಲಾಡಳಿತ ಸಹ ಅವರ ಕುಟುಂಬಕ್ಕೆ ಧೈರ್ಯ ತುಂಬಿತು. ದೇವರ ಆಶೀರ್ವಾದದಿಂದ ಚೈತ್ರಾ ಇಲ್ಲಿಗೆ ಬಂದಿದ್ದಾರೆ ಎಂದರು.
200ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇನ್ನು ಅಲ್ಲಿಯೇ ಇದ್ದಾರೆ. ಅಂಬೇಸಿ ಸಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಮೋದಿಯವರು ಸಹ ಸ್ವತಃ ಅವರೇ ಮಾನಿಟರ್ ಮಾಡ್ತಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಏರ್ ಲಿಫ್ಟ್ ಕಾರ್ಯ ಆಗುತ್ತಿದೆ. ಬಾರ್ಡರ್ 4-5 ರಾಷ್ಟ್ರಗಳು ಮೋದಿಯವರೊಂದಿಗೆ ಬಹಳ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲದೆ ಮೃತ ನವೀನ್ ದೇಹವನ್ನ ಸಹ ಕರೆತರುವ ಕಾರ್ಯ ನಡೆಯುತ್ತಿದೆ. ಯುದ್ಧದ ಸ್ಥಿತಿಯನ್ನ ನೋಡಿಕೊಂಡು, ಆದಷ್ಟು ಬೇಗ ಮೃತ ದೇಹ ತರುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
PublicNext
06/03/2022 12:04 pm