ಹೊಸದಿಲ್ಲಿ: ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿಯೂ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ನಿಯಮ ಜಾರಿಗೆ ಬರಲಿದೆ.
ಹೀಗೆಂದು ಸ್ವತಃ ಭಾರತೀಯ ಅಂಚೆ ಇಲಾಖೆಯೇ ಟ್ವೀಟ್ ಮಾಡಿದೆ.
ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ 500 ರೂ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ ಈ ಅಧಿಕೃತ ನಿಯಮ ಡಿ.11 ರಿಂದ ಜಾರಿಯಾಗಲಿದ್ದು ಅದರೊಳಗಾಗಿ 500 ರೂ ಮೆಂಟೇನ್ ಮಾಡಿ.
ಇಲ್ಲದಿದ್ದರೆ, ಖಾತೆಯಿಂದ ನಿರ್ವಹಣ ವೆಚ್ಚ ಕಡಿತ ಗೊಳ್ಳುತ್ತದೆ ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ.
ವಿತ್ತೀಯ ವರ್ಷದ ಅಂತ್ಯದಲ್ಲಿ ಖಾತೆಯಲ್ಲಿ ಕನಿಷ್ಠ ಮೊತ್ತ 500 ರೂ.ಗಳು ಇಲ್ಲವೆಂದಾದಲ್ಲಿ, ಖಾತೆ ನಿರ್ವಹಣ ವೆಚ್ಚದ ರೂಪದಲ್ಲಿ 100 ರೂ.ಗಳನ್ನು ಕಡಿತ ಮಾಡಲಾಗುತ್ತದೆ.
ಒಂದು ವೇಳೆ, ಉಳಿತಾಯ ಖಾತೆಯಲ್ಲಿ ಶೂನ್ಯ ಮೊತ್ತವಿದ್ದರೆ, ಆಗ ತನ್ನಿಂತಾನೇ ಆ ಖಾತೆ ರದ್ದಾಗಲಿದೆ.
ಇದಲ್ಲದೇ, ತಿಂಗಳ 10ನೇ ದಿನಾಂಕ ದಿಂದ ಕೊನೆಯ ದಿನಾಂಕದವರೆಗಿನ ಅವಧಿಯಲ್ಲಿ ಖಾತೆಯಲ್ಲಿ 500 ರೂ.ಗಳಿಗಿಂತ ಕಡಿಮೆ ಮೊತ್ತವಿದ್ದರೆ, ಆ ತಿಂಗಳ ಬಡ್ಡಿಯೂ ಸಿಗುವುದಿಲ್ಲ ಎಂದೂ ಅಂಚೆ ಇಲಾಖೆ ಸ್ಪಷ್ಟಪಡಿಸಿದೆ.
PublicNext
30/11/2020 08:25 am