ನವದೆಹಲಿ: ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಪೂರ್ವ ಲಡಾಕ್‌ನ ಪಂಗೊಂಗ್ ಸರೋವರ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಭಾರತೀಯ ನೌಕಾಪಡೆಯ ‘ಮೆರೀನ್ ಕಮಾಂಡೋಸ್’ (ಮಾರ್ಕೊಸ್) ನಿಯೋಜಿಸಿದೆ.
ಪೂರ್ವ ಲಡಾಕ್‌ನ ಎಲ್‌ಎಸಿಯಲ್ಲಿ ಕಳೆದ ಏಳು ತಿಂಗಳಿಂದ ಚೀನಾ ಸೇನೆ ಜತೆಗೆ ಮಿಲಿಟರಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಈಗಾಗಲೇ ಭೂಸೇನಾ ಪಡೆ ಮತ್ತು ವಾಯುಪಡೆಯ ಹಲವು ತುಕಡಿಗಳನ್ನು ನಿಯೋಜಿಸಿದೆ. ಅಷ್ಟೇ ಅಲ್ಲದೆ ಶನಿವಾರದಿಂದ ನೌಕಾಪಡೆಯ ವಿಶೇಷ ದಳ ಮಾರ್ಕೊಸ್ ಅನ್ನು ಕೂಡ ಪ್ಯಾಂಗಾಂಗ್ ಸರೋವರ ತೀರದ ಪ್ರದೇಶದಲ್ಲಿ ನಿಯೋಜಿಸಿದೆ.
ಭೂಸೇನೆಯಲ್ಲಿ ಎನ್‌ಎಸ್‌ಜಿ, ಪ್ಯಾರಾ ಕಮಾಂಡೊ, ವಾಯುಪಡೆಯಲ್ಲಿ ಗರುಡ್ ಕಮಾಂಡೊಗಳಿದ್ದಂತೆ ನೌಕಾ ಪಡೆಯಲ್ಲಿ ಮಾರ್ಕೊಸ್ ಪಡೆಯಿದೆ. ಮಾರ್ಕೊಸ್ ವಾಯುಪಡೆ, ಗುರುಡಾಕ್ಕಿಂತ ಹಳೆಯದು ಮತ್ತು ಶಕ್ತಿಶಾಲಿಯಾಗಿರುತ್ತದೆ. ಯಾವುದೇ ಪ್ರತಿಕೂಲ ಸನ್ನಿವೇಶದಲ್ಲೂ ಭೂಸೇನೆ, ವಾಯುಪಡೆಯ ಜೊತೆಗೂಡಿ ಕೆಲಸ ಮಾಡುತ್ತದೆ.
ನೌಕಾಪಡೆಯ ಮಾರ್ಕೊಸ್ ಕಮಾಂಡೊಗಳಿಗೆ ಶೀಘ್ರವೇ ವಿಶೇಷ ದೋಣಿಗಳನ್ನು ಕೂಡ ಪೂರೈಕೆ ಮಾಡಲು ಸಿದ್ಧತೆ ನಡೆದಿದೆ. ಸರೋವರ ಪ್ರದೇಶದಲ್ಲಿನ ಒಂದಿಂಚು ಭೂಮಿಯನ್ನು ಕೂಡ ಚೀನಾ ಸೈನಿಕರು ಆಕ್ರಮಿಸಲು ಅವಕಾಶ ನೀಡದಂತೆ ಕಮಾಂಡೊಗಳು ಅಗತ್ಯ ಕಾರ್ಯತಂತ್ರವನ್ನು ಹೆಣೆದು ಕಾವಲಿಗೆ ನಿಲ್ಲಲಿದ್ದಾರೆ.
PublicNext
28/11/2020 08:44 pm