ಹೊಸದಿಲ್ಲಿ : ಪ್ರಚಲಿತ ವಿದ್ಯಮಾನಗಳು ಸೇರಿದಂತೆ ಆನ್ ಲೈನ್ ಮೂಲಕ ಸುದ್ದಿ ಪ್ರಸಾರ ಮಾಡುವ ಎಲ್ಲ ಮಾಧ್ಯಮಗಳು ಇನ್ನು ಮುಂದೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ವ್ಯಾಪ್ತಿಗೆ ಬರಲಿದ್ದು ಈ ಬಗ್ಗೆ ಅಧಿಕೃತ ಆದೇಶ ಹೊರಡಿಲಾಗಿದೆ.
ಆನ್ ಲೈನ್ ಮೂಲಕ ಪ್ರಸಾರವಾಗುವ ಚಲನ ಚಿತ್ರಗಳು ಹಾಗೂ ಆಡಿಯೋ ವಿಜ್ಯುವಲ್ಸ್ ಸಹ ಇಲಾಖೆ ವ್ಯಾಪ್ತಿಗೆ ಬರಲಿವೆ. ಕಳೆದ ವರ್ಷ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ ಜಾವಡೇಕರ್, ಓಟಿಟಿ ವೇದಿಕೆಗಳ ನಿಯಂತ್ರಣಕ್ಕೆ ಈ ರೀತಿ ಒಂದು ವ್ಯವಸ್ಥೆ ಅವಶ್ಯವಿದೆ ಎಂದು ಹೇಳಿದ್ದರು.
PublicNext
12/11/2020 10:58 am