ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಣ್ಣೆ ಏಟಿನಲ್ಲಿ ಅರೆಬೆತ್ತಲೆ ಡಾನ್ಸ್ ಮಾಡಿದ ಸರ್ಕಾರಿ ನೌಕರರು

ಶಿವಮೊಗ್ಗ: ಎಣ್ಣೆ ಏಟಿಗೆ ಎಲ್ಲವೂ ಅಯೋಮಯ ಹಾಗಾಗಿಯೇ ಈ ಸರ್ಕಾರಿ ನೌಕರರು ನಡೆದುಕೊಂಡಿರುವ ರೀತಿ ಇಡೀ ಇಲಾಖೆಯೇ ತಲೆ ತಗ್ಗಿಸುವಂತೆ ಮಾಡಿದೆ.

ಹೌದು ಕರ್ತವ್ಯದ ವೇಳೆ ಸರ್ಕಾರಿ ನೌಕರರು ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅರೆಬೆತ್ತಲೆಯಾಗಿ ನಗ್ನತೆ ಪ್ರದರ್ಶನ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದ ಬಳಿ ನಡೆದಿದೆ.

ಕುಡಿದ ಅಮಲಿನಲ್ಲಿ ಮೆಸ್ಕಾಂ ನೌಕರರು ಕುಣಿದು ಕುಪ್ಪಳಿಸಿದ್ದಾರೆ.

ಚಂದ್ರಶೇಖರ್ ರಾಥೋಡ್, ವಿನಯ್ ಕುಮಾರ್, ರವಿ, ಸುರೇಶ, ಮಂಜುನಾಥ್, ಮಹೇಶ್ವರಪ್ಪ ಎಂಬುವರು ಕಂಠಪೂರ್ತಿ ಕುಡಿದು ಬೈಕ್ ಸ್ಟಂಟ್ ಮಾಡಿದ್ದಲ್ಲದೆ ಸಾರ್ವಜನಿಕರ ಸ್ಥಳದಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ.

ಇವರ ಈ ಅಸಭ್ಯ ವರ್ತನೆ ವಿಡಿಯೋ ವೈರಲ್ ಆಗಿದ್ದು ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Edited By : Nirmala Aralikatti
PublicNext

PublicNext

08/11/2020 01:58 pm

Cinque Terre

51.14 K

Cinque Terre

12

ಸಂಬಂಧಿತ ಸುದ್ದಿ