ಬೆಂಗಳೂರು- ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಿ ಸರ್ಕಾರ ಆದೇಶ ನೀಡಿದೆ. ಇನ್ನೇನು ಅದರ ಮಾರ್ಗಸೂಚಿ ಬರೋದೊಂದು ಬಾಕಿ ಉಳಿದಿದೆ. ಈ ನಡುವೆ ಸರ್ಕಾರದ ಈ ನಿರ್ಧಾರಕ್ಕೆ ಪರ- ವಿರೋಧ ಕೇಳಿ ಬರುತ್ತಿದೆ.
ವ್ಯಾಪಾರಿಗಳು ಈಗಾಗಲೇ ಲಕ್ಷಾಂತರ ಬಂಡವಾಳ ಹಾಕಿ ಪಟಾಕಿ ಖರೀದಿಸಿ ಮಾರಾಟಕ್ಕೆ ಅಣಿಯಾಗಿದ್ದಾರೆ. ಈಗ ಪಟಾಕಿ ನಿಷೇಧ ಮಾಡಿದ್ದರಿಂದ ಅವರೆಲ್ಲ ಕಂಗಾಲಾಗಿದ್ದಾರೆ.
ಆದ್ರೆ ತಜ್ಞರು ಹಾಗೂ ಪರಿಸರವಾದಿಗಳು ಸರ್ಕಾರದ ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಪಟಾಕಿ ನಿಷೇಧದಿಂದ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಕಡಿಮೆಯಾಗಲಿದೆ ಅನ್ನೋದು ಅವರ ವಾದ.
ಆದ್ರೆ ಪಟಾಕಿ ನಿಷೇಧದ ಬೆನ್ನಲ್ಲೇ ಗ್ರಾಹಕರು ಪಟಾಕಿ ಖರೀದಿಸಿ ಇಟ್ಟುಕೊಂಡಿದ್ದಾರೆ.
PublicNext
07/11/2020 04:41 pm