ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ : ಕ್ವಿಂಟಲ್ ಗೆ ಎಷ್ಟು ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 'ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ' (ಸಿಸಿಇಎ)ಯು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿ ನಿರ್ಣಯ ಕೈಗೊಂಡಿದೆ.

ತೆಂಗಿನ ಎಣ್ಣೆ ಉತ್ಪಾದನೆಗೆ ಬಳಸುವ ಕೊಬ್ಬರಿಯ (ಮಿಲ್ಲಿಂಗ್ ಕೊಪ್ರಾ) ಮತ್ತು ತಿನ್ನುವ ಕೊಬ್ಬರಿಯ (ಬಾಲ್ ಕೊಪ್ರಾ) ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಕೇಂದ್ರ ಸರ್ಕಾರವು ಕ್ರಮವಾಗಿ ಕ್ವಿಂಟಲ್ ಗೆ ರೂ. 375ರಷ್ಟು ಮತ್ತು ರೂ. 300ರಷ್ಟು ಏರಿಕೆ ಮಾಡಿದೆ.

ಸಾಮಾನ್ಯ ಗುಣಮಟ್ಟದ (ಎಫ್ ಎಕ್ಯು) ಮಿಲ್ಲಿಂಗ್ ಕೊಪ್ರಾದ ಎಂಎಸ್ ಪಿಯನ್ನು ಕ್ವಿಂಟಲ್ ಗೆ ರೂ.9,960ರಿಂದ ರೂ. 10,335ಕ್ಕೆ ಹೆಚ್ಚಿಸಲಾಗಿದೆ. ಬಾಲ್ ಕೊಪ್ರಾ ಬೆಲೆ ಕ್ವಿಂಟಲ್ ಗೆ ರೂ. 10,300ರಿಂದ ರೂ. 10,600ಕ್ಕೆ ಏರಿಕೆಯಾಗಿದೆ.

ಮಿಲ್ಲಿಂಗ್ ಕೊಪ್ರಾದ ಎಂಎಸ್ ಪಿಯು ಉತ್ಪಾದನಾ ವೆಚ್ಚಕ್ಕಿಂತಲೂ ಶೇ 52ರಷ್ಟು ಹಾಗೂ ಬಾಲ್ ಕೊಪ್ರಾ ಎಂಎಸ್ಪಿ ಶೇ 55ರಷ್ಟು ಹೆಚ್ಚಿಗೆ ಇದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

28/01/2021 11:30 am

Cinque Terre

81.23 K

Cinque Terre

0

ಸಂಬಂಧಿತ ಸುದ್ದಿ