ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನ್ನದಾತರ ಪ್ರತಿಭಟನೆಗೆ ಟ್ರ್ಯಾಕ್ಟರ್ ಸಾಥ್ : ಸಿಂಘು-ಟಿಕ್ರಿ ಗಡಿ ತಲುಪಿದ 1.25 ಲಕ್ಷ ಟ್ರ್ಯಾಕ್ಟರ್ ಗಳು

ನವದೆಹಲಿ : ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಅನ್ನದಾತರು ನಿರಂತರ ಪ್ರತಿಭಟನರ ನಡೆಸುತ್ತಿದ್ದಾರೆ.

ನಾಳೆ ಜ.26 ರಂದು ರೈತರು ಟ್ರ್ಯಾಕ್ಟರ್ rally ನಡೆಸಲು ಸಜ್ಜುಗೊಂಡಿದ್ದು, ಈಗಾಗಲೇ ಸಿಂಘು-ಟಿಕ್ರಿ ಗಡಿ ಪ್ರದೇಶಕ್ಕೆ 1.25 ಲಕ್ಷ ಟ್ರ್ಯಾಕ್ಟರ್ ಗಳು ಜಮಾಯಿಸಿವೆ.

ಟ್ರ್ಯಾಕ್ಟರ್ rally ನಡೆಸುವುದಕ್ಕೆ ರೈತರಿಗೆ ಈಗಾಗಲೇ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಟ್ರ್ಯಾಕ್ಟರ್ ಗಳು ಒಂದನ್ನು ಮತ್ತೊಂದು ಓವರ್ ಟೇಕ್ ಮಾಡುವಂತಿಲ್ಲ. ಟ್ರಾಲಿಗಳ ಬಳಕೆಗೆ ಪರೇಡ್ ನಲ್ಲಿ ಅವಕಾಶವಿಲ್ಲ. ಒಂದು ಟ್ರ್ಯಾಕ್ಟರ್ ನಲ್ಲಿ ಚಾಲಕ ಸೇರಿ 5 ಮಂದಿಗೆ ಅವಕಾಶ.

ಟ್ರ್ಯಾಕ್ಟರ್ rally ಶಾಂತಿಯುತವಾಗಿ ನಡೆಯುವುದಕ್ಕೆ ರೈತ ಒಕ್ಕೂಟಗಳೂ ಕ್ರಮ ಕೈಗೊಂಡಿದ್ದು ವಿವಿಧ ವಿಭಾಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ 2,500 ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗಿದೆ.

ಈ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್, ಪಂಜಾಬ್ ನ ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೌಲ್ ಪ್ರತಿಭಟನೆ ಶಾಂತಿಯುತವಾಗಿ ನಡೆಯುವುದಕ್ಕಾಗಿ ಶಿಸ್ತು ಸಮಿತಿ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

25/01/2021 04:03 pm

Cinque Terre

54.08 K

Cinque Terre

2

ಸಂಬಂಧಿತ ಸುದ್ದಿ