ದೆಹಲಿ: ರೈತ ಮುಖಂಡರ ಜೊತೆಗಿನ ಕೇಂದ್ರ ಸರ್ಕಾರದ 8ನೇ ಸಭೆಯೂ ವಿಫಲಗೊಂಡಿದ್ದು, ಜನವರಿ 15ರಂದು ಇನ್ನೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿದೆ.
ದೆಹಲಿ ಚಲೋ ಚಳುವಳಿಯ 44ನೇ ದಿನ ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಸಭೆ ನಡೆಯಿತು. ಮಧ್ಯಾಹ್ನ ಎರಡು ಘಂಟೆಯ ಹೊತ್ತಿಗೆ ಸಭೆಗೆ ಆಗಮಿಸಿದ ರೈತ ಪ್ರತಿನಿಧಿಗಳು ವಿಜ್ಞಾನ ಭವನದ ಹೊರಗೆ ಸ್ವತಃ ತಾವೇ ತಂದಿದ್ದ ಆಹಾರವನ್ನು ಸೇವಿಸಿದರು.
ಸಭೆಯುದ್ದಕ್ಕೂ ಬಿರುಸಿನ ಚರ್ಚೆ ನಡೆಯಿತು. ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಯಾವುದೇ ನ್ಯಾಯಾಲಯದಲ್ಲಿ ವಾದಿಸಲು ಸಹ ಸಿದ್ಧ ಎಂದು ಆಲ್ ಇಂಡಿಯಾ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ಹನ್ನನ್ ಮೊಲ್ಲಾಹ್ ತಿಳಿಸಿದರು. ಅಲ್ಲದೇ, ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಪರೇಡ್ ಸಹ ನಡೆಸುತ್ತೇವೆ ಎಂದು ಸಭೆಯಲ್ಲಿ ಘೋಷಿಸಿದರು.
PublicNext
08/01/2021 09:46 pm