ನವದೆಹಲಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ರೈತರು ನಿರಂತರ ಪ್ರತಿಭಟನೆ ನಡೆಸಿದರು ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಸದ್ಯ ಪ್ರತಿಭಟನೆ ನಿರತ ರೈತರು ಪ್ರತಿಭಟನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಪ್ರಧಾನಿಗಳ ಮನ್ ಕೀ ಬಾತ್ ಕಾರ್ಯಕ್ರಮ ವೇಳೆ ತಟ್ಟೆ ಬಾರಿಸುವಂತೆ ಪ್ರತಿಭಟನಾ ನಿರತ ಅನ್ನದಾತರು ಕರೆ ನೀಡಿದ್ದಾರೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020 ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020ನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 26ನೇ ದಿನಕ್ಕೆ ಕಾಲಿಟ್ಟಿದೆ.
ತಮ್ಮ ಪ್ರತಿಭಟನೆಯನ್ನ ತೀವ್ರಗೊಳಿಸಿರುವ ರೈತ ಸಂಘಟನೆಗಳು, ಇಂದಿನಿಂದ 24 ಗಂಟೆಗಳ ರಿಲೇ-ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಇಂದು ಸರದಿಯಲ್ಲಿ ರೈತರು ಉಪವಾಸ ನಡೆಸಲಿದ್ದು, 23ನೇ ತಾರೀಖಿನಂದು ಒಂದು ಹೊತ್ತಿನ ಊಟ ಬಿಡಲು ಕರೆ ಕೊಟ್ಟಿದ್ದಾರೆ.
ಅಂದು ಕಿಸಾನ್ ದಿವಸ್ ಆದ ಹಿನ್ನೆಲೆಯಲ್ಲಿ ಒಂದೇ ಹೊತ್ತು ಊಟ ಮಾಡಲು ನಿರ್ಧರಿಸಿದ್ದಾರೆ.
ಡಿ.27ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ವೇಳೆ ಥಾಲೀ ಕೀ ಬಾತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಮನ್ ಕೀ ಬಾತ್ ಮುಗಿಯುವ ತನಕ ತಟ್ಟೆ-ಪ್ಲೇಟ್ ಬಾರಿಸಿ ರೈತರಿಗೆ ಬೆಂಬಲ ನೀಡುವಂತೆ ಕರೆ ನೀಡಲಾಗಿದೆ.
PublicNext
21/12/2020 09:08 am