ನವದೆಹಲಿ : ಕೇಂದ್ರ ಸರ್ಕಾರ ಮತ್ತೆ ಅನ್ನದಾತರ ಖಾತೆಗೆ ಹಣ ಜಮೆ ಮಾಡಲಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ 'ಕಿಸಾನ್ ಕಲ್ಯಾಣ್' ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡುವ ವೇಳೆ ತಿಳಿಸಿದ್ದಾರೆ.
'ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು (ಡಿ. 25) ನಾನು ಮತ್ತೆ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದೇನೆ.
ಅದೇ ದಿನ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮತ್ತೊಂದು ಕಂತಿನ ಹಣವನ್ನು ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು' ಎಂದು ಪ್ರಧಾನಿ ಹೇಳಿದರು.
ಪ್ರತಿ ವರ್ಷ ರೈತರಿಗೆ ತಲಾ 6 ಸಾವಿರ ರೂ.ಗಳನ್ನು ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ನೀಡುತ್ತಿದೆ.
ಅದರ ಒಂದು ಕಂತಾಗಿ ತಲಾ 2 ಸಾವಿರ ರೂ.ಗಳು ಡಿ. 25ರಂದು ರೈತರ ಖಾತೆಗಳಿಗೆ ಜಮಾ ಆಗಲಿವೆ.
ಇದೇ ವಿಷಯವನ್ನು ಪ್ರಧಾನಿ ಟ್ವಿಟರ್ ಮೂಲಕವೂ ಸ್ಪಷ್ಟಪಡಿಸಿದ್ದಾರೆ.
2019ರಲ್ಲಿ ಮೋದಿ ಈ ಯೋಜನೆಯನ್ನು ಆರಂಭಿಸಿದ್ದಾರೆ. ಪ್ರಸ್ತುತ 14.5 ಕೋಟಿ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
PublicNext
18/12/2020 10:04 pm