ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾಂಕ್ ಗಳ ಸೇವಾ ಶುಲ್ಕದಲ್ಲಿ ಏರಿಕೆ ಇಲ್ಲ ಆರ್ ಬಿಐ ಸ್ಪಷ್ಟನೆ

ನವದೆಹಲಿ: ಬ್ಯಾಂಕ್ ತನ್ನ ಗ್ರಾಹಕರಿಗೆ ನೆಮ್ಮದಿಯ ಸುದ್ದಿವೊಂದನ್ನಾ ನೀಡಿದೆ.

ಸಾರ್ವಜನಿಕ ವಲಯದ ಬ್ಯಾಂಕ್ ಗಳು ನ.1ರಿಂದ ಸೇವಾ ಶುಲ್ಕ ಹೆಚ್ಚಿಸಿರುವ ಕುರಿತ ವರದಿ ಹಿನ್ನೆಲೆಯಲ್ಲಿ ಜನಧನ, ಮೂಲ ಉಳಿತಾಯ (ಬಿಎಸ್ ಬಿಡಿ) ಬ್ಯಾಂಕ್ ಖಾತೆದಾರರಿಗೆ ಹೆಚ್ಚುವರಿ ಸೇವಾ ಶುಲ್ಕ ವಿಧಿಸಿಲ್ಲ ಎಂದು ಹಣಕಾಸು ಸಚಿವಾಲಯ ಹಾಗೂ ಆರ್ ಬಿಐ ಮಂಗಳವಾರ ಸ್ಪಷ್ಟಪಡಿಸಿವೆ.

41.43 ಕೋಟಿ ಜನಧನ ಖಾತೆ ಸಹಿತ ಒಟ್ಟು 60.64 ಕೋಟಿ ಬಿಎಸ್ ಬಿಡಿ ಖಾತೆಗಳಿವೆ.

ಸಾಮಾನ್ಯ ಉಳಿತಾಯ ಖಾತೆ, ಚಾಲ್ತಿ ಖಾತೆ, ನಗದು ಕ್ರೆಡಿಟ್ ಖಾತೆ ಮತ್ತು ಓವರ್ ಡ್ರಾಫ್ಟ್ ಖಾತೆಗಳಿಗೆ ಸಂಬಂಧಿಸಿ ಯಾವುದೇ ಸೇವಾ ಶುಲ್ಕ ಹೆಚ್ಚಿಸಿಲ್ಲ.

ತಿಂಗಳಿಗೆ ಮೂರು ಸಾರಿ ಹಣ ಜಮಾ, ವಿತ್ ಡ್ರಾವಲ್ ಗೆ ಯಾವುದೇ ಶುಲ್ಕವಿಲ್ಲ.

ನಾಲ್ಕನೇ ವಹಿವಾಟಿಗೆ ಶುಲ್ಕ ತೆರಬೇಕು ಎಂದು ಹೇಳಲಾಗಿತ್ತು. ಬ್ಯಾಂಕ್ ಆಫ್ ಬರೋಡಾ ಇದನ್ನು ನ.1ರಿಂದ ಜಾರಿಗೆ ತಂದಿತ್ತು.

ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬದಲಾವಣೆಗಳನ್ನು ವಾಪಸ್ ಪಡೆಯಲು ಅದು ನಿರ್ಧರಿಸಿದೆ.

Edited By : Nirmala Aralikatti
PublicNext

PublicNext

04/11/2020 11:27 am

Cinque Terre

28.19 K

Cinque Terre

0