ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಈರುಳ್ಳಿ ಬಿತ್ತನೆ ಬೀಜ ರಫ್ತು ನಿಷೇಧ'

ನವದೆಹಲಿ: ತಕ್ಷಣ ಜಾರಿಗೆ ಬರುವಂತೆ ಈರುಳ್ಳಿ ಬಿತ್ತನೆ ಬೀಜಗಳ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ದೇಶೀಯ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಭಾರೀ ಏರಿಕೆಯಾಗಿದೆ. ಆದರೆ ಈ ಹಿಂದೆ ಈರುಳ್ಳಿ ಬಿತ್ತನೆ ಬೀಜಗಳ ರಫ್ತು ಮಾಡುವವರು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವುದು ಅಗತ್ಯವಿತ್ತು.

ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯವು, 'ಈರುಳ್ಳಿ ಬಿತ್ತನೆ ಬೀಜಗಳನ್ನು ರಫ್ತು ಮಾಡುವುದನ್ನು ನಿಷೇಧಿಸಲಾಗಿದ್ದು, ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ. ಆದರೆ ಇದಾಗಲೇ ರಫ್ತಿಗೆ ಸಿದ್ಧವಾಗಿರುವ ಸರಕುಗಳಿಗೆ ಸೂಚನೆ ಅನ್ವಯಿಸುವುದಿಲ್ಲ" ಎಂದು ತಿಳಿಸಿದೆ.

Edited By : Vijay Kumar
PublicNext

PublicNext

29/10/2020 08:37 pm

Cinque Terre

96.49 K

Cinque Terre

1