ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಡ್‌ನ್ಯೂಸ್: ಇನ್ಮುಂದೆ ಪುರುಷರಿಗೂ ಸಿಗಲಿದೆ ಮಕ್ಕಳ ರಕ್ಷಣೆ ರಜೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದೆ.

ಹೌದು. ಏಕಾಂಗಿಯಾಗಿ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ಚೈಲ್ಡ್‌ ಕೇರ್‌ ಲೀವ್ (ಸಿಸಿಎಲ್) ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಂದರೆ ಸಿಂಗಲ್‌ ಪೇರೆಂಟ್‌ ಆಗಿರುವ ಪುರುಷರಿಗೆ ಸಿಸಿಎಲ್ ಸೌಲಭ್ಯ ದೊರೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, 'ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇಗಾಗಲೇ ಸಿಸಿಎಲ್ ಸೌಲಭ್ಯವಿದೆ. ಈಗ ಇದನ್ನು ಒಂಟಿ ಪುರುಷರಿಗೂ ಅನ್ವಯ ಮಾಡಲಾಗುತ್ತಿದೆ. ಮಕ್ಕಳ ಪೋಷಣೆ ವಿಚಾರದಲ್ಲಿ ಪತಿಗೂ ಪತ್ನಿಯಷ್ಟೇ ಜವಾಬ್ದಾರಿ ಇದೆ. ಇದೇ ಕಾರಣದಿಂದ ಅವರ ಹೊಣೆಯನ್ನು ಗಮನದಲ್ಲಿರಿಸಿ ಇಂಥದ್ದೊಂದು ಅವಕಾಶ ಕಲ್ಪಿಸಲಾಗಿದೆ' ಎಂದು ತಿಳಿಸಿದ್ದಾರೆ.

ಅವಿವಾಹಿತರು, ವಿಧುರ ಅಥವಾ ವಿಚ್ಛೇದನ ಪಡೆದವರು ಇದರ ಪ್ರಯೋಜನ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಮೊದಲ 365 ದಿನಗಳವರೆಗೆ ಭತ್ಯೆ ಸಂಬಳದ ಶೇ.100ರಷ್ಟು ಪಡೆಯಲು ಅವಕಾಶವಿದೆ. ನಂತರದ 365 ದಿನಗಳಿಗೆ ಶೇ. 80ರಷ್ಟು ಭತ್ಯೆ ಸಂಬಳ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.

Edited By : Vijay Kumar
PublicNext

PublicNext

27/10/2020 05:46 pm

Cinque Terre

67.99 K

Cinque Terre

5

ಸಂಬಂಧಿತ ಸುದ್ದಿ