ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ ಐಸಿಯಿಂದ ಅಂಚೆ ಇಲಾಖೆಗೆ ಬಂದ 'ಭಾಗ್ಯಲಕ್ಷ್ಮಿ'

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೆಚ್ಚಿನ ಯೋಜನೆಯಾದ 'ಭಾಗ್ಯಲಕ್ಷ್ಮಿ' ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆಯ 'ಸುಕನ್ಯಾ ಸಮೃದ್ಧಿ' ಮೂಲಕ ಮುಂದುವರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಇನ್ನು ಮುಂದೆ ಈ ಯೋಜನೆಗೆ ಎಲ್ ಐಸಿ ಬದಲು ಅಂಚೆ ಇಲಾಖೆ ಏಜೆನ್ಸಿಯಾಗಿರುತ್ತದೆ.

ಈ ಸಂಬಂಧ ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಅದಕ್ಕೆ ಸಚಿವ ಸಂಪುಟದ ಒಪ್ಪಿಗೆ ಸಿಗಬೇಕಿತ್ತು ಅದು ಈಗಾ ಸಾದ್ಯವಾಗಿದೆ.

ಎಲ್ ಐಸಿ ಬೇಡಿಕೆ ಈಡೇರಿಸಬೇಕಿದ್ದರೆ ಸರ್ಕಾರಕ್ಕೆ ವಾರ್ಷಿಕ 2 ಸಾವಿರ ಕೋಟಿ ರೂ. ಹೊರೆ ಹೊರಬೇಕಿತ್ತು.

ಈ ಅಧಿಕ ಹೊರೆ ಹೊರುವುದರ ಬದಲು ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾಯಿಸಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಿಲೀನಗೊಳಿಸಲು ಸಂಪುಟ ಸಭೆ ತೀರ್ಮಾನಿಸಿದೆ.

ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಜಾರಿಗೊಳಿಸಿದ್ದರು.

ಯೋಜನೆಯನ್ನು ಸುಕನ್ಯಾ ಸಮೃದ್ಧಿಯೊಂದಿಗೆ ವರ್ಗಾಯಿಸಿದರೂ 'ಭಾಗ್ಯಲಕ್ಷ್ಮಿ' ಹೆಸರಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಅಲ್ಲದೆ, ಫಲಾನುಭವಿಗೆ ದೊರೆಯುವ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 1 ಲಕ್ಷ ರೂ. ಸಿಗುತ್ತದೆ.

Edited By : Nirmala Aralikatti
PublicNext

PublicNext

23/10/2020 07:42 am

Cinque Terre

54.94 K

Cinque Terre

10

ಸಂಬಂಧಿತ ಸುದ್ದಿ