ಗದಗ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶಿಲ್ಪಾ ಬೂದಿಹಾಳ ಒಂದು ದಿನದ ಮಟ್ಟಿಗೆ ಕ್ರೀಡಾ ಇಲಾಖೆಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ರು.
ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಹಿನ್ನೆಲೆ ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯತ್ ಸಯೋಗದಲ್ಲಿ ದಿನದ ಅಧಿಕಾರಿಯನ್ನ ನಿಯೋಜಿಸಲಾಗಿತ್ತು. ಸರ್ಕಾರದ ಅದೇಶದಂತೆ ದಿನದ ಅಧಿಕಾರಿಯಾಗಲು 18 ರಿಂದ 23 ವರ್ಷದ ಒಳಗಿರುವ ಹೆಣ್ಣು ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಬಂದ ಐದು ಅರ್ಜಿಗಳ ಪೈಕಿ ಆರ್ ಡಿಪಿಆರ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶಿಲ್ಪಾ ಬೂದಿಹಾಳ ಅವರನ್ನ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆ ಕ್ರೀಡಾ ಇಲಾಖೆಯ ಯುವ ಅಧಿಕಾರಿಯಾಗಿ ದಿನಾಂಕ 11 ರಂದು ದಿನದ ಮಟ್ಟಿಗೆ ಶಿಲ್ಪಾ ಅವರು ಕೆಲಸ ನಿರ್ವಹಿಸಿದ್ದಾರೆ.
ಕ್ರೀಡಾ ಇಲಾಖೆಯ ಉಪ ನಿರ್ದೇಶಕ ವಿಠ್ಠಲ್ ಜಾಬಗೌಡರ್, ಶಿಲ್ಪಾ ಅವರಿಗೆ ಇಲಾಖೆಯ ಕಾರ್ಯ ವೈಖರಿಯನ್ನು ತಿಳಿಸಿದ್ರು.. ಅಧಿಕಾರಿಗಳ ಪರಿಚಯ, ಕ್ರೀಡಾ ಇಲಾಖೆಯ ಬಗ್ಗೆ ಮಾಹಿತಿಯನ್ನ ಶಿಲ್ಪಾ ಅವರಿಗೆ ನೀಡಲಾಗಿದೆ.. ಯುವ ಜನರಲ್ಲಿ ಇಲಾಖೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡಲಾಗಿದೆ ಅಂತಾ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ವಿಠ್ಠಲ ಜಾಬಗೌಡರ್ ಮಾಹಿತಿ ನೀಡಿದ್ರು.
PublicNext
11/10/2022 07:58 pm