ಗದಗ ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚು ಕಾಣುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ದಿನಗಳಿಂದ ಗದಗದಿಂದ ಮುಂಡರಗಿ ರಸ್ತೆಯ ನಯರಾ ಪೆಟ್ರೋಲ್ ಬಂಕ್ ಎದುರಿಗೆ ಕುಡಿಯುವ ನೀರು ಪೋಲು ಆಗುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಜನರು ದಿನನಿತ್ಯವೂ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ. ಸತತವಾಗಿ ಎರಡು ದಿನಗಳಿಂದ ಕುಡಿಯುವ ನೀರು ಪೋಲು ಆಗುತ್ತಿದೆ ಎಂದು ಸ್ಥಳೀಯರು ಹೇಳಿದರು. ಇಷ್ಟೇಲ್ಲಾ ಇದ್ದರೂ ಅಧಿಕಾರಿಗಳ ಈವರೆಗೂ ಪೋಲು ಆಗುತ್ತಿರುವ ನೀರನ್ನು ಸರಿಪಡಿಸಿಲ್ಲ. ಇನ್ನಾದರೂ ಪೋಲು ಆಗುತ್ತಿರುವ ನೀರನ್ನು ಅಧಿಕಾರಿಗಳು ಅಥವಾ ನಗರಾಡಳಿತ ಸರಿಪಡಿಸುವವರೆ ಕಾದು ನೋಡಬೇಕಾಗಿದೆ.
PublicNext
01/10/2022 05:31 pm