ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸರ್ಕಾರಿ ಶಾಲೆಯಲ್ಲಿ ಪ್ರವಾದಿ ಪೈಗಂಬರ್ ಬಗ್ಗೆ ಪ್ರಬಂಧ ಆಯೋಜನೆ; ಮುಖ್ಯ‌ ಶಿಕ್ಷಕ‌ ಅಮಾನತು

ಇಸ್ಲಾಂ ಧರ್ಮ ಪ್ರವರ್ತಕ ಪ್ರವಾದಿ ಮೊಹಮದ್ ಪೈಗಂಬರ್ ಅವರ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದ ಜಿಲ್ಲೆಯ ನಾಗಾವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪುರ ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ.

ಸಮಾಜದ ಸ್ವಾಸ್ಥ್ಯ ಕದಡುವ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಅಭಿಮಾನ ಹುಟ್ಟಿಸುವ ಪ್ರಯತ್ನ ಇದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗದಗ ತಾಲ್ಲೂಕಿನ ನಾಗಾವಿ ಶಾಲೆಯಲ್ಲಿ ಇಸ್ಲಾಮೀಕರಣ ಪ್ರಯತ್ನ ನಡೆಯುತ್ತಿದೆ ಎಂದು ಸೆ.27ರಂದು ಶ್ರೀರಾಮಸೇನೆ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಂತಿ ಪ್ರಕಾಶನ ಪ್ರಕಟಿಸಿರುವ ಮೊಹಮದ್ ಪೈಗಂಬರ್ ಅವರ ಜೀವನ ಮತ್ತು ಬೋಧನೆ ಕುರಿತ ಪುಸ್ತಕವನ್ನು ಮಕ್ಕಳಿಗೆ ಕೊಟ್ಟಿದ್ದ ಮುಖ್ಯ ಶಿಕ್ಷಕರು ಪ್ರಬಂಧ ಬರೆಯಲು ಸೂಚಿಸಿದ್ದರು. ಇದು ಶ್ರೀರಾಮಸೇನೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು.

ಪಠ್ಯದಲ್ಲಿ ಇಲ್ಲದ ವಿಷಯದ ಬಗ್ಗೆ ಪ್ರಬಂಧ ಬರೆಯಲು ಸೂಚಿಸಿದ್ದು ಏಕೆ ಎಂದು ಕಾರ್ಯಕರ್ತರು ಪ್ರಶ್ನಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕರಾಗಿರುವ ಎ.ಎಲ್.ಬಿಜಾಪುರ ಅವರು ಪೈಗಂಬರ್ ಅವರಿಗೆ ಸಂಬಂಧಿಸಿದ ಪುಸ್ತಕವೊಂದನ್ನು 8 ನೇ ತರಗತಿ ಮಕ್ಕಳಿಗೆ ಕೊಟ್ಟು ಓದಲು ಪ್ರೇರೇಪಿಸಿದ್ದರು. ನಂತರ ಪ್ರಬಂಧ ಬರೆಯುವಂತೆ ಮಕ್ಕಳಿಗೆ ಸೂಚಿಸಿದ್ದರು.ಉತ್ತಮ ಪ್ರಬಂಧಕ್ಕೆ ₹ 8 ಸಾವಿರ ಬಹುಮಾನ ನೀಡುವುದಾಗಿ ಹೇಳಿದ್ದರು.ಇಂಥ ಪ್ರಯತ್ನಗಳ ಮೂಲಕ ಮಕ್ಕಳನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಾರ್ಯಕರ್ತರು ದೂರಿದ್ದರು.

Edited By :
PublicNext

PublicNext

29/09/2022 04:18 pm

Cinque Terre

31.59 K

Cinque Terre

21