ಕುಟಂಬಸ್ಥರು ಚಲಿಸುತ್ತಿದ್ದ ಬುಲೆರೋ ವಾಹನವೊಂದಕ್ಕೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಭಾರಿ ಅವಘಡವೊಂದು ತಪ್ಪಿದಂತಾಗಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದ ಸಮೀಪ ಈ ಘಟನೆ ಜರುಗಿದೆ.
ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಮೈಲಾರಪ್ಪ ಹಕ್ಕಿಮನಿ ಅನ್ನೋರಿಗೆ ಈ ವಾಹನ ಸೇರಿದ್ದು, ಕುಟುಂಬಸ್ಥರೆಲ್ರೂ ಸವದತ್ತಿಯಿಂದ ಬಾಚಲಾಪೂರ ಗ್ರಾಮಕ್ಕೆ ತೆರಳುತ್ತಿದ್ದರೆನ್ನಲಾಗಿದೆ.
ಹೀಗೆ ದಾರಿ ಮಧ್ಯೆ ಒಮ್ಮೇಲೆ ಬೋಲೆರೋ ವಾಹನದ ಎಂಜಿನ್‌ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ. ಶಾರ್ಟ್ ಸರ್ಕ್ಯೂಟ್ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
PublicNext
12/09/2022 07:51 pm