ಗದಗ: ರಾಹುಲ್ ಗಾಂಧಿ ತಲೆ ರೈಲ್ವೆ ಹಳಿ ಇದ್ದಂತೆ. ಆತನ ಬುದ್ಧಿಗೂ ಅವಂಗೂ ಭೇಟಿಯೇ ಆಗೊಲ್ಲ. ಪ್ಯಾರಲ್ ಆಗಿ ಹೋಗುವ ರೈಲ್ವೆ ಹಳಿ ಎಲ್ಲಿಯೂ ಕೂಡುವದಿಲ್ಲ ಎಂದು ರಾಹುಲ್ ಗಾಂಧಿ ಕುರಿತು ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ ವ್ಯಂಗ್ಯವಾಡಿದ್ರು.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿ.ಸಿ ಪಾಟೀಲ್ ಈ ಭಾರತ್ ಜೋಡೋ ಹೆಸರಿಟ್ಟವರಿಗೆ ಸತ್ಕಾರ ಮಾಡಬೇಕು. ಭಾರತ್ ಜೋಡೋ ವಿಂಗಡಣೆ, ವಿಭಜನೆಯಾದಾಗ ಬರುತ್ತೆ. ಇವರ ತಾತ, ಮುತ್ತಾತ ಭಾರತದಿಂದ ಜಮ್ಮು ಕಾಶ್ಮೀರವನ್ನ ಬೇರೆ ಮಾಡಿಟ್ಟಿದ್ದರು. ಜವಾಹರ್ ಲಾಲ್‌ನಿಂದು ಹಿಡಿದು ಮನಮೋಹನ್ ಸಿಂಗ್‌ವರೆಗೂ ಎಲ್ಲ ಕಾಂಗ್ರೆಸ್ ಪ್ರಧಾನಿಗಳು ನೀರು, ಗೊಬ್ಬರ ಹಾಕಿ ಬೆಳೆಸಿದ್ರು.
ಕಾಶ್ಮೀರಕ್ಕೆ ಹೋಗದ ಪರಿಸ್ಥಿತಿ ಇತ್ತು. ಮೋದಿ ಹಾಗೂ ಅಮಿತ್ ಶಾ ಆರ್ಟಿಕಲ್ 370 ತೆಗೆದು ಹಾಕಿದ್ರು.ಕಾಶ್ಮೀರವನ್ನ ಭಾರತದ ಅವಿಭಾಜ್ಯ ಅಂಗ ಮಾಡಿದ್ರು. ಅಖಂಡ ಭಾರತ ಇದ್ರೆ ಮೊಹ್ಮದ್ ಅಲಿ ಜಿನ್ನಾ ನನಗೆಲ್ಲಿ ಕುತ್ತು ತರ್ತಾನೆ ಅಂತ ನೆಹರೂ ಭಾರತವನ್ನ ವಿಭಜನೆ ಮಾಡಿದ್ರು. ಯಾರು ಭಾರತವನ್ನು ವಿಭಜನೆ ಮಾಡಿದಾರೋ ಅವರು ಇಂದು ಭಾರತ ಜೋಡೋ ಹೊರಟಿದಾರೆ.
ಹಿಂದುಸ್ಥಾನ ತುಕಡೆ ಕರೆಂಗೇ. ಇನ್ಶಾ ಅಲ್ಲಾ ಅನ್ನುವ ಕನ್ಹಯ್ಯಲಾಲ್‌ನಂಥವರು ಭಾರತ ಜೋಡೋ ಯಾತ್ರೆಯಲ್ಲಿದಾರೆ. ಭಾರತವನ್ನ ವಿಭಜನೆ ಮಾಡುವಂಥ ವಿಚಿತ್ರಕಾರಕ ಶಕ್ತಿಗಳನ್ನ ಒಗ್ಗೂಡಿಸುವ ಯಾತ್ರೆ ರಾಹುಲ್ ಗಾಂಧಿ ಮಾಡ್ತಿದಾರೆ. ಅಂತಹ ಪುಣ್ಯಾತ್ಮನಿಗೆ ನಮ್ಮ ರಾಜ್ಯದ ಇಬ್ಬರು ನಾಯಕರು ಕುಣಿಯುತ್ತಾ ಸಾಥ್ ಕೊಡ್ತಿದಾರೆ. PFI ಸಂಘಟನೆ, ಪೊಲೀಸರ ರೈಫಲ್ಗಳು ಎಲ್ಲಿ ಕಳುವಾಗಿಯೋ, ಎಲ್ಲಿ ಜೀವಂತ ಗುಂಡುಗಳು ಕಳುವಾಗಿವೆಯೋ, ಅಂಥ ಕೇರಳದಿಂದಲೇ ಇವರು ಯಾತ್ರೆ ಪ್ರಾರಂಭ ಮಾಡಿದ್ದಾರೆ.
ಹಿಂದುಸ್ಥಾನದ ಬಗ್ಗೆ ಕೀಳಾಗಿ ಮಾತನಾಡುವ ಪಾದ್ರಿ ಜೊತೆ ಇವರು ಸಂವಾದ ಮಾಡ್ತಾರೆ. ಇದು ಭಾರತ್ ಜೋಡೋನಾ? ಅಥವಾ ಭಾರತ್ ತೋಡೋನಾ? ಎಂದು ಸಚಿವ ಸಿ.ಸಿ.ಪಾಟೀಲ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
PublicNext
06/10/2022 10:11 pm