ಗದಗ: ರಾಹುಲ್ ಗಾಂಧಿ ಭಾರತ್ ಜೋಡೊ ಕಾರ್ಯಕ್ರಮಕ್ಕೆ ಬಂದಿಲ್ಲ. ಬದಲಾಗಿ ಡಿಕೆಶಿ, ಸಿದ್ದರಾಮಯ್ಯರನ್ನ ಜೋಡಿಸಲು ಬಂದಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕುರಿತು ವ್ಯಂಗ್ಯವಾಡಿದ್ರು.
ಮಾಧ್ಯಮಗಳೆದುರು ಮಾತನಾಡಿದ ಅವರು, ಭಾರತ ಜೋಡಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಮೋದಿ ವಿಶ್ವ ಮಟ್ಟದಲ್ಲಿ ಜೋಡಿಸುತ್ತಿದ್ದಾರೆ ಎಂದರು. ನಮ್ಮ ಪಕ್ಷದ ಮೇಲೆ ೪೦% ಆರೋಪ ಸರಿಯಲ್ಲ. ರಾಹುಲ್ ಗಾಂಧಿ, ಅವರ ತಾಯಿ, ಸಹಚರರು ಬೇಲ್ ನಲ್ಲಿದ್ದಾರೆ ನೆನಪಿರಲಿ. ನಿಮ್ಮ ಅಧಿಕಾರದಲ್ಲಿ ಏನು ಮಾಡಿದ್ದಿರಿ. ತಿರುಗಿ ನೋಡಿ? ಶಿಕ್ಷಣ ಇಲಾಖೆ ಹಾಗೂ ಅರ್ಕಾವತಿ ಏನಾಗಿದೆ ಎಂಬುದನ್ನು ನೋಡಿ. ಪೇಸಿಎಂ ಟಿಶರ್ಟ್ ಹಾಕಿದ ಕೂಡಲೆ ರಾಜ್ಯದ ಜನತೆ ಅವರ ಕಡೆ ಹೋಗ್ತಾರೆ ಎಂಬುದು ಭ್ರಮೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು.
ಇನ್ನು ಸಿಪಿ ಯೋಗಿಶ್ವರ-ಎಚ್.ಡಿ.ಕೆ ವಾರ್ ವಿಚಾರವಾಗಿ ಪ್ರತಿಕ್ರಯಿಸಿ, ಎಚ್.ಡಿ ಕುಮಾರಸ್ವಾಮಿ ವಿಚಾರವಾಗಿ ಖಂಡಿಸುತ್ತೆನೆ. ಮಾಜಿ ಸಿಎಂ ಆಗಿ,ಅಭಿವೃದ್ಧಿ ವಿಚಾರದಲ್ಲಿ ಹೀಗೆ ಮಾಡುವುದು ಸರಿಯಲ್ಲ. ಅಭಿವೃದ್ಧಿಯೇ ಬೇರೆ ರಾಜಕಾರಣವೇ ಬೇರೆ. ಬಿಜೆಪಿ ಯಾವಾಗಲೂ ಸಿಪಿವೈ ಹಿಂದಿದೆ. ಸಿಪಿವೈ ಅವರನ್ನು ನಾವ್ಯಾರೂ ಬಿಟ್ಟುಕೊಡಲ್ಲ ಎಂದ್ರು.
ಇನ್ನು ಸಿದ್ದರಾಮಯ್ಯ ಆರ್.ಎಸ್.ಎಸ್ ಬ್ಯಾನ್ ಹೇಳಿಕೆ ಕುರಿತು ಉತ್ತರಿಸಿ,ಆರ್.ಎಸ್.ಎಸ್ ದೇಶ ಭಕ್ತಿ ಸಂಸ್ಥೆಯಾಗಿದ್ದು,ದೇಶ ಭಕ್ತಿ ಸಂಸ್ಥೆ ಬ್ಯಾನ್ ಮಾಡುವಂತೆ ಹೇಳುವವರ ತಲೆ ಸರಿ ಇದೆಯಾ?ಎಂದು ಟಗರು ಹೇಳಿಕೆಗೆ ಟಾಂಗ್ ನೀಡಿದ್ರು.
ಪಿಎಫ್ಐ ದೇಶದ್ರೋಹ ಮಾಡುವ ಸಂಘಟನೆ.ದೇಶದ ಅನ್ನ, ನೀರು, ಗಾಳಿ ಕುಡಿದು ದೇಶಕ್ಕೆ ಮಾರಕವಾಗುವುದು ಎಷ್ಟು ಸರಿ.ದೇಶಭಕ್ತಿ, ದೇಶ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ಆರ್.ಎಸ್.ಎಸ್ ಮಾಡ್ತಿದೆ.ಓಟ್ ಬ್ಯಾಂಕ್ ರಾಜಕಾರಣ ಬಿಡಿ, ದೇಶ ಉಳಿಸುವ ಕೆಲಸ ಮಾಡಿ ಎಂದು ಗದಗನಲ್ಲಿ ಸಚಿವ ಬೈರತಿ ಬಸವರಾಜ್ ಹೇಳಿಕೆ ನೀಡಿದ್ರು.
PublicNext
02/10/2022 04:25 pm