ಗದಗ: ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕವಾಗಿ ಗಣೇಶ ಉತ್ಸವ ಆಚರಿಸಲು ಸಾರ್ವಕರ್ ಮುನ್ನಡಿ ಬರೆದರು. ಸಾವರ್ಕರ್ ಅವರ ಚಪ್ಪಲಿಯ ಧೂಳಿನ ಸಮಾನ ಅಲ್ಲದವರು ಇವತ್ತು ಟೀಕೆ ಮಾಡ್ತಿದ್ದಾರೆ. ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹರಿಹಾಯ್ದರು.
ಅವರು ಗದಗ ನಗರದ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇವಲ ಗಾಂಧಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಸಾವರ್ಕರ್, ಭಗತ್ ಸಿಂಗ್ ಸೇರಿದಂತೆ ಹಲವರಿಂದ ಸಿಕ್ಕಿದೆ. ಗಣೇಶನನ್ನು 21 ದಿನ ಕೂರಿಸುತ್ತೇವೆ ಎಂದು ನಾನು ಸಿಎಂ ಬೊಮ್ಮಾಯಿ ಅವರಿಗೆ ಹೇಳಿದ್ದೆ. ಅದಕ್ಕೆ ಅವರು ಆಯ್ತು ಗೌಡ್ರೆ ಅಂದ್ರು. ಇನ್ನೊಂದು ವರ್ಷ ತಡೀರಿ ಪಾಕಿಸ್ತಾನದಲ್ಲೂ ಗಣಪತಿ ಕೂರಸ್ತೇವೆ ಎಂದು ಯತ್ನಾಳ್ ಹೇಳಿದ್ದಾರೆ.
PublicNext
19/09/2022 11:40 am