ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ಮಾಡಿಸೋ ತಾಕತ್ತು ನನಗೂ ಇದೆ; ಸಚಿವ ಸಿ.ಸಿ.ಪಾಟೀಲ

ಗದಗ: ಹೈದ್ರಾಬಾದ್‌ನಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಶೇ 40 ಕಮಿಷನ್ ಸರ್ಕಾರ ಎಂದು ನಾಮಫಲಕ ಪ್ರದರ್ಶಿಸಿ ಅವಮಾನ ಮಾಡಿರೋ ವಿಚಾರವಾಗಿ ಗದಗನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಈ ಕೃತ್ಯದ ಕರ್ತೃ ಆಗಿದ್ದು, ಅವಮಾನ ಮಾಡಿದವರ ಮನೆ ಎದುರು ಎಷ್ಟು ಜನರನ್ನು ಪ್ರತಿಭಟನೆಗೆ ಕಳಿಸಲಿ ಹೇಳಿ ಎಂದು ಪ್ರಶ್ನಿಸಿ ಟಾಂಗ್ ನೀಡಿದ್ದಾರೆ.

ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ಮಾಡಿಸುವ ತಾಕತ್ತು ನನಗೂ ಇದೆ. ಭೂತದ ಕೈಯಲ್ಲಿ ಭಗವದ್ಗೀತೆ ಕೇಳುವಂತಾಗಿದೆ. ಭ್ರಷ್ಟಾಚಾರ ಎಸಗಿ ತಿಹಾರ್ ಜೈಲಿಗೆ ಹೋಗಿ ಬಂದವರು ಭಗವದ್ಗೀತೆ ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್‌ ಅವರಿಗೆ ಕುಟುಕಿದರು.

Edited By : Nagesh Gaonkar
PublicNext

PublicNext

18/09/2022 06:29 pm

Cinque Terre

31.26 K

Cinque Terre

3

ಸಂಬಂಧಿತ ಸುದ್ದಿ