ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹದಗೆಟ್ಟ ರಸ್ತೆಗಳು; ಯಂಗ್ ಇಂಡಿಯಾ ಸಂಘಟನೆಯಿಂದ ಪ್ರತಿಭಟನೆಗೆ ಸಜ್ಜು

ಗದಗ: ಲೋಕೋಪಯೋಗಿ ಸಚಿವರು ಗದಗ ಜಿಲ್ಲೆಯವರೇ ಆಗಿದ್ರೂ, ಅವಳಿ ನಗರದ ಪ್ರಮುಖ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಗುತ್ತಿಲ್ಲ. ಇದನ್ನು ಖಂಡಿಸಿ ನಾಳೆ ಸೆ.17 ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಲಾಗುವದು ಎಂದು ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಆರ್. ಗೋವಿಂದಗೌಡ್ರ ಹೇಳಿದರು.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯವರೇ ಆಗಿರುವ ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲರು ರಸ್ತೆಗಾಗಿಯೇ 1700 ಕೋಟಿ ರೂ.ಮೀಸಲಿಟ್ಟಿದ್ದಾಗಿ ಹೇಳುತ್ತಿದ್ದಾರೆ.ಇನ್ನೊಬ್ಬ ನಾಯಕರು ಗದಗ-ಬೆಟಗೇರಿಯಲ್ಲಿ ಫ್ಲೈ ಓವರ್ ಆಗುತ್ತದೆ ಅಂತೆಲ್ಲ ಹೇಳುತ್ತ 700 ಕೋಟಿ ರೂ.ಬಂದಿದೆ ಎಂದು ನಗರದ ತುಂಬೆಲ್ಲ ಫ್ಲೆಕ್ಸ್ ಹಾಕಿಕೊಂಡು ಓಡಾಡಿದರು. ಆದರೆ, ಈವರೆಗೂ ರಸ್ತೆಗಳು ಮಾತ್ರ ದುರಸ್ತಿಯಾಗುತ್ತಿಲ್ಲ.

ಪಿ.ಬಿ. ರಸ್ತೆ, ಹೊಸ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಗಳಲ್ಲಿ ಬಸ್, ಲಾರಿಗಳು ಓಡಾಡಲು ಹರಸಾಹಸ ಪಡುತ್ತಿವೆ. ದ್ವಿಚಕ್ರ ವಾಹನ ಸವಾರರನ್ನು ದೇವರೇ ಕಾಪಾಡಬೇಕು ಎನ್ನುವಂತಿದೆ. ಮತ್ತೊಂದೆಡೆ ಆಟೋ ರಿಕ್ಷಾ ಓಡಿಸಿ ಬದುಕು ಕಟ್ಟಿಕೊಳ್ಳುತ್ತಿರುವ ಆಟೋ ಚಾಲಕರು,ಈ ರಸ್ತೆಗಳಲ್ಲಿ ಬಾಡಿಗೆ ಹೋದರೆ, ಗಾಡಿಯ ಬಿಡಿವಾಹನ ಹಾನಿಯಾಗುತ್ತದೆ. ಇದರಿಂದ ಆಟೋ ಚಾಲಕರು ಎರಡು ಬಾಡಿಗೆಯಷ್ಟು ಹಣವನ್ನು ಆಟೋ ದುರಸ್ತಿಗೆ ನೀಡುವಂತಾಗಿದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ನಾಗಾರ್ಜುನ ಕಾಳೆ, ಹನಂತಪ್ಪ ಕೊಳಗನವರ, ಅನೇಕರು ಭಾಗಿಯಾಗಿದ್ದರು.

Edited By : Nagesh Gaonkar
PublicNext

PublicNext

16/09/2022 08:31 pm

Cinque Terre

30.06 K

Cinque Terre

1

ಸಂಬಂಧಿತ ಸುದ್ದಿ