ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಖಾಸಗಿ ನಿವೇಶನಗಳಲ್ಲಿ ಮೂಲಭೂತ ಸೌಕರ್ಯ ಕೊರತೆ: ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪ್ರತಿಭಟನೆ

ಗದಗ: ಖಾಸಗಿ ನಿವೇಶನದ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದ ನಿವೇಶನಗಳನ್ನು ಜನತೆಗೆ ಮಾರಾಟ ಮಾಡಿದ, ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ, ಕಿಸಾನ್ ಜಾಗೃತಿ ರೈತ ಸಂಘಟನೆ ವತಿಯಿಂದ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಪುರಸಭೆ ಎದುರು ಧರಣಿ ಸತ್ಯಾಗ್ರಹ ಮಾಡಲಾಯಿತು.

ಈ ವೇಳೆ ಕಿಸಾನ್ ಜಾಗೃತಿ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ವಿಶ್ವನಾಥ್ ತಾಬ್ರಗುಂಡಿ ಮಾತನಾಡಿ,ಮುಂಡರಗಿ ಪಟ್ಟಣದಲ್ಲಿರುವ‌ ಖಾಸಗಿ ನಿವೇಶನದ ಬಡಾವಣೆಯಲ್ಲಿ,ಯಾವುದೇ‌ ಮೂಲಭೂತ ಸೌಲಭ್ಯಗಳಿಲ್ಲದೇ ಎನ್.ಎ ಮಾಡಿ ನಿವೇಶನಗಳನ್ನು ನಾಗರಿಕರಿಗೆ ಮಾರಾಟ‌ ಮಾಡಿದ್ದಾರೆ. ಮೂಲಭೂತ ಸೌಲಭ್ಯಗಳಿಲ್ಲದ ಬಡಾವಣೆಗಳನ್ನ ಮಾರಾಟ ಮಾಡಿರುವ ಮಾಲೀಕರು ಹಾಗೂ ಪರವಾನಿಗೆ ನೀಡಿದ ಪುರಸಭೆ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಇದರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಅಂತ ಎಚ್ಚರಿಕೆ ನೀಡಿದ್ರು.

ಇದೇ ಸಂದರ್ಭದಲ್ಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷದ ರೋಣ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ, ದೊಡ್ಡಯ್ಯ ಆನೇಕಲ್ ಮಾತನಾಡಿ, ಮೂಲಭೂತ ಸೌಕರ್ಯಗಳಾದ ರಸ್ತೆ ನೀರು ವಿದ್ಯುತ್ತು ಸೌಲಭ್ಯಗಳು ಜನರಿಗೆ ಬಹಳ ಅವಶ್ಯವಾಗಿದ್ದು, ಇದ್ಯಾವುದೂ ಇಲ್ಲದೆ ನಿವೇಶನ ಹಂಚಿಕೆ ಮಾಡಿದ ಮಾಲಕರಿಗೆ, ಅಧಿಕಾರಿಗಳಿಗೆ ಕ್ರಿಮಿನಲ್ ಕೇಸ್ ದಾಖಲಿಸಬೇಕು.ನಾವು ಕೂಡ ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುತ್ತವೆ ಎಂದರು.

ಈ ವೇಳೆ ತಾಲೂಕ ಅಧ್ಯಕ್ಷ ಗಣೇಶ್ ಬರಮಕ್ಕನವರ್, ಶಿವಕುಮಾರಗೌಡ ಪಾಟೀಲ, ಬಸವರಾಜ್ ದೇಸಾಯಿ,ಮಲ್ಲಿಕಾರ್ಜುನ್ ದೊಡ್ಡಮನಿ, ಹನುಮಂತ್ ಚನ್ನ ದಾಸರ್, ಕಿಸಾನ್ ಜಾಗೃತಿ ವಿಕಾಸ ಸಂಘದ ಜಿಲ್ಲಾ ಮತ್ತು ತಾಲೂಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
PublicNext

PublicNext

14/09/2022 05:45 pm

Cinque Terre

25.42 K

Cinque Terre

0

ಸಂಬಂಧಿತ ಸುದ್ದಿ