ಗದಗ : ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ಎರಡನೇ ದಿನವೂ ಅಹೋರಾತ್ರಿ ಧರಣಿ ಜರುಗಿದೆ. ಹಕ್ಕುಪತ್ರ ವಿತರಣೆ ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡನೇ ದಿನವೂ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಈ ಧರಣಿಯೂ ಸರಕಾರ ಮತ್ತು ರೈತರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ ನೀ ಕೊಡೆ ನಾ ಬಿಡೆ ಎಂಬಂತಾಗಿದೆ ರೈತರ ಧರಣಿ. ಅಧಿಕಾರಿಗಳಿಂದ ಎರಡು ದಿನದಿಂದ ನಡೆಯುತ್ತಿದೆ ಕಸರತ್ತು ಆದರು ಜಗ್ಗಲ್ಲಿಲ್ಲ ರೈತರು ಸಾಗುವಳಿ ಮಾಡ್ತಿರೋ ಜಮೀನು ಹಕ್ಕು ಪತ್ರ ವಿತರಿಸಬೇಕು ಅಲ್ಲಿವರೆಗೆ ಧರಣಿ ಕೈಬಿಡುವುದಿಲ್ಲ ಎಂದ ರೈತರು.
ಅರಣ್ಯ ಇಲಾಖೆಯ ಅಧಿಕಾಗಳ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಕುಟುಂಬಕ್ಕೆ ಸಂಪೂರ್ಣ ಪರಿಹಾರ ಕೊಡಬೇಕು ಅಂತ ಒತ್ತಾಯ ನಡೆಸಿದ್ದಾರೆ.
ಕೆಲೂರು ಗ್ರಾಮದ ನಿರ್ಮಲಾ ಪಾಟೀಲ್ ಅಧಿಕಾರಿಗಳ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಇದುವರೆಗೂ ಪರಿಹಾರವಿಲ್ಲ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಇದುವರೆಗೂ ತನಿಖೆ ಆಗಿಲ್ಲ ಎಂದು ಕಿಡಿ ಕಾರಿದರು.
PublicNext
13/09/2022 11:00 pm