ಗದಗ: ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನ ಒದಗಿಸುವಂತೆ ಆಗ್ರಹಿಸಿ 17 ನೇ ವಾರ್ಡ್ ನ ಭೀಮಾಂಬಿಕಾ ನಗರದ ನಿವಾಸಿಗಳು ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಪುರಸಭೆ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
ಈ ಮೊದಲು ಎರೆಡು ದಿನಕ್ಕೊಮ್ಮೆ ಕುಡಿಯುವ ನೀರು ಒದಗಿಸಲಾಗುತ್ತಿತ್ತು. ಆದರೆ ಪುರಸಭೆ ಸಿಬ್ಬಂದಿಗಳ ಬೇಜವಾಬ್ದಾರಿತನಿಂದ ಸುಮಾರು 15 ದಿನಗಳಿಗೊಮ್ಮೆ ನೀರು ಬರ್ತಿದೆ, ಅಲ್ಲದೇ ಕಸ ಒಯ್ಯಲು ಬರುವದಿಲ್ಲ, ಶೌಚಾಲಯ ಸಮಸ್ಯೆ ಇದೆ ಮತ್ತು ಚರಂಡಿ ಸ್ವಚ್ಛಗೊಳಿಸುವದಿಲ್ಲ, ಹೀಗಾದರೆ ಜೀವನ ಮಾಡೋದಾದ್ರೂ ಹೇಗೆ? ತಕ್ಷಣ ಪುರಸಭೆ ಮುಖ್ಯಾಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮವಹಿಸಿ ಸಮಸ್ಯೆ ಸರಿಪಡಿಸಬೇಕೆಂದು ಪ್ರತಿಭಟನಾನಿರತರು ಒತ್ತಯಿಸಿದರು.
Kshetra Samachara
20/09/2022 06:30 pm