", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1738600454-ramuuuuuuuu.mp4_snapshot_00.00.000.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ : ಹಾಲು ಕೊಡುವ, ಹಾಲು ಕೊಡದೇ ಇರುವ ಎಮ್ಮೆಯನ್ನು ಒಂದೇ ಸಾಲಿನಲ್ಲಿ ಕಟ್ಟಿ ಹಾಕುವುದು ಸರಿಯಲ್ಲ, ಅದನ್ನು ಯಾರೂ ಒಪ್ಪುವುದೂ ಇಲ್ಲ ಎಂದು ಮಾಜಿ...Read more" } ", "keywords": "B Sriramulu, Karnataka Politics, BJP Leader, Farmers Issue, Cattle Management, Animal Husbandry, Karnataka Government, Farmers Welfare, Rural Development, B Sriramulu Quotes.,Gadag,Politics", "url": "https://publicnext.com/article/nid/Gadag/Politics" }
ಗದಗ : ಹಾಲು ಕೊಡುವ, ಹಾಲು ಕೊಡದೇ ಇರುವ ಎಮ್ಮೆಯನ್ನು ಒಂದೇ ಸಾಲಿನಲ್ಲಿ ಕಟ್ಟಿ ಹಾಕುವುದು ಸರಿಯಲ್ಲ, ಅದನ್ನು ಯಾರೂ ಒಪ್ಪುವುದೂ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡುವವರನ್ನು, ಕೆಲಸ ಮಾಡದಿರುವವರನ್ನು ಒಂದೇ ಸಾಲಿನಲ್ಲಿ ಕಟ್ಟಿ ಹಾಕುವ ಕೆಲಸವಾಗುತ್ತಿದೆ, ಅದು ಆಗಬಾರದು ಎಂದರು.
ಪಕ್ಷದಲ್ಲಿ ಯಾರು ಎಷ್ಟೇ ದೊಡ್ಡವರಾಗಿದ್ದರೂ, ಹೈಕಮಾಂಡ್ ಯಾರು ತಪ್ಪು ಮಾಡಿದ್ದಾರೆ ಅವರನ್ನು ಕಾರ್ಯಕರ್ತ ಎಂದು ಪರಿಗಣಿಸಿ ಮಾತನಾಡಬೇಕು. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಗಟ್ಟಿಯಾದ ನಿರ್ಧಾರ, ಸೂಚನೆ, ಆದೇಶ ನೀಡುವಂತಹ ಕೆಲಸ ರಾಷ್ಟ್ರೀಯ ನಾಯಕರು ಮಾಡಬೇಕು. ಯಾರು ಶ್ರಮ ಪಟ್ಟು ಪಕ್ಷಕ್ಕಾಗಿ ದುಡಿಯುತ್ತಾರೆ, ರಾಜ್ಯದಲ್ಲಿ ಯಾರು ಸಂಘಟನೆ ಮಾಡುತ್ತಾರೆ, ಶೇ. 7ರಿಂದ 8ರಷ್ಟು ಮತಗಳನ್ನು ವ್ಯತ್ಯಾಸ ಮಾಡುವಂತಹ ನಾಯಕರಿಗೆ ಗೌರವ ಕೊಡಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ರಾಜ್ಯದ ಬಿಜೆಪಿ ನಾಯಕರು ತಮ್ಮ ತಮ್ಮ ಅಭಿಪ್ರಾಯ ತಿಳಿಸಲು ದೆಹಲಿಗೆ ತೆರಳಿದ್ದಾರೆ. ಬಹುಶಃ ಯಾವುದೇ ವಿಚಾರಗಳು, ಸಮಸ್ಯೆಗಳು ಪರಿಹಾರವಾಗಬೇಕೆಂದರೆ ಅದು ಹೈಕಮಾಂಡ್ ನಲ್ಲಿ ಮಾತ್ರ. ಯಾವುದೇ ಸಮಸ್ಯೆಗಳಿಗೆ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೈಕಮಾಂಡ್ ಜೊತೆ ಕುಳಿತುಕೊಂಡು ಏನು ಮಾಡಬೇಕು ಎಂಬುದನ್ನು ಯೋಚನೆ ಮಾಡಬೇಕಾಗುತ್ತದೆ. ಎಲ್ಲರೂ ಸೇರಿ ಹೈಕಮಾಂಡ್ ಜೊತೆಗೆ ಮಾತನಾಡಿಕೊಳ್ಳಲಿ, ಅದನ್ನು ಕಾರ್ಯರೂಪಕ್ಕೂ ತರಲಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಹೈಕಮಾಂಡ್ ನಾಯಕರೊಂದಿಗೆ ಮುಂಚೆಯಿಂದಲೂ ನಾನು ಸಂಪರ್ಕ ಇಟ್ಟುಕೊಂಡಿದ್ದೇನೆ. ಆಗಾಗ ಹೈಕಮಾಂಡ್ ಗೆ ಭೇಟಿ ನೀಡಿ ಎಲ್ಲ ವಿಚಾರಗಳನ್ನು ಹೇಳಿಕೊಂಡು ಬಂದಿದ್ದೇನೆ. ಶಧ್ಯ ವೈಯಕ್ತಿಕವಾಗಿ ಕೆಲಸ ಇದ್ದ ಕಾರಣ ಹೋಗಲು ಸಾಧ್ಯವಾಗಿಲ್ಲ. ಸಮಯ ಕೊಟ್ಟು ಹೋಗಬೇಕೆಂದಿಲ್ಲ, ಸಮಯ ಕೂಡಿ ಬಂದಿಲ್ಲ, ಆದ್ದರಿಂದ ಹೋಗಲು ಸಾಧ್ಯವಾಗಿಲ್ಲ ಎಂದು ಹೈಕಮಾಂಡ್ ಭೇಟಿ ಮಾಡದಿರುವ ಕುರಿತು ಸ್ಪಷ್ಟನೆ ನೀಡಿದರು.
PublicNext
03/02/2025 10:04 pm