ಗದಗ: ಬಿಜೆಪಿಯಲ್ಲಿ ರೆಬೆಲ್ಸ್ ನಡೆ ನಿಗೂಢವಾಗಿದೆ. ಒಂದ್ಕಡೆ ರೆಬೆಲ್ ನಾಯಕರು ದೆಹಲಿಗೆ ಹೋದ್ರೆ, ಇನ್ನೊಂದು ಕಡೆ ಆಪ್ತರ ಮೂಲಕ ಇನ್ನುಳಿದವರ ಮನವೊಲಿಸುವ ಕೆಲಸ ಆಗ್ತಿದೆ.
ಈ ಸಂದರ್ಭ ಗದಗನಲ್ಲಿ ಬಿ.ಶ್ರೀರಾಮುಲು ಹಾಗೂ ಪಿ.ರಾಜೀವ್ ಗುಪ್ತ ಮೀಟಿಂಗ್ ಮಾಡಿದ್ದಾರೆ. ನಗರದ ಶ್ರೀರಾಮುಲು ಮನೆಗೆ ಪಿ.ರಾಜೀವ್ ಬಂದಿದ್ದು, ಈ ಉಭಯ ನಾಯಕರ ಗುಪ್ತ ಮೀಟಿಂಗ್ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.
ಪಿ.ರಾಜೀವ್ ಮಾಜಿ ಶಾಸಕ ಹಾಗೂ ಬಿಜೆಪಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ. ಅಷ್ಟೇ ಅಲ್ಲದೆ, ಪಿ.ರಾಜೀವ್ ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡವರು.
ಶ್ರೀರಾಮುಲು ಅವರೂ ಬಿ.ವೈ. ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದು, ಅವರನ್ನು ಸಮಾಧಾನ ಪಡಿಸಲು ಬಂದಿದ್ರಾ ರಾಜೀವ್ ಅನ್ನುವ ಕುತೂಹಲದ ಪ್ರಶ್ನೆ ಮೂಡುತ್ತಿದೆ.
-ಆರ್.ಎಂ.ಪಾಟೀಲ, ಪಬ್ಲಿಕ್ ನೆಕ್ಸ್ಟ್ ಗದಗ
PublicNext
03/02/2025 03:15 pm