ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮುದ್ರಣ‌ ಕಾಶಿಯಲ್ಲಿ RSS ಪಥ ಸಂಚಲನ; ಸುರಿಯುವ ಮಳೆಯಲ್ಲಿಯೇ ಖಾಕಿ‌ ಬಂದೋಬಸ್ತ್

ಗದಗ: ಇಂದು ಮುದ್ರಣ ಕಾಶಿ ಗದಗ ನಗರದಲ್ಲಿ RSS ಪಥ ಸಂಚಲನ ನಡೆಯಿತು. ಮಳೆಯಲ್ಲಿಯೇ RSS ಗಣವೇಷಧಾರಿಗಳು ಹೆಜ್ಜೆ ಹಾಕಿದ್ರು. ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದ ಆವರಣದಿಂದ ಆರಂಭವಾದ ಪಥಸಂಚಲನದ ಮೆರವಣಿಗೆ,ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುನ್ಸಿಪಲ್ ಕಾಲೇಜ್ ಮೈದಾನಕ್ಕೆ ತಲುಪಿ ಮುಕ್ತಾಯಗೊಂಡಿತು.

ಮೆರವಣಿಗೆಯಲ್ಲಿ RSS ವಾದ್ಯಗೋಷ್ಠಿ ಪ್ರಮುಖ ಆಕರ್ಷಣೆಯಾಗಿತ್ತು.ಪಥ ಸಂಚಲನದಲ್ಲಿ ಸಾವಿರಾರು ಗಣವೇಷಧಾರಿಗಳು ಭಾಗಿಯಾಗಿದ್ದರು.ಇತ್ತ ಮಳೆಯಲ್ಲಿಯೇ RSS ಕಾರ್ಯಕರ್ತರೊಂದಿಗೆ ಪೊಲೀಸರು ಸಹ ಹೆಜ್ಜೆ ಹಾಕಿ ಮೆರವಣಿಗೆಯುದ್ದಕ್ಕೂ ಬಂದೋಬಸ್ತ್ ಕಲ್ಪಿಸಿದರು.

ಮಾರ್ಗದ ಉದ್ದಕ್ಕೂ ಗಣವೇಷಧಾರಿಗಳಿಗೆ ಹೂವಿನ ಸುರಿಮಳೆಗೈಯ್ಯಲಾಯಿತು.ಸುರಿಯುವ ಮಳೆ ಲೆಕ್ಕಿಸದೆ ಕಾರ್ಯಕರ್ತರು ಶಿಸ್ತುಬದ್ಧ ಹೆಜ್ಜೆ ಹಾಕಿದ್ರು.ಪ್ರತಿ ವರ್ಷ ವಿಜಯ ದಶಮಿ ನಂತರ RSS ಪಂಥ ಸಂಚಲನ ನಡೆಯುತ್ತಾ ಬಂದಿದೆ.

Edited By : PublicNext Desk
Kshetra Samachara

Kshetra Samachara

09/10/2022 07:24 pm

Cinque Terre

9.8 K

Cinque Terre

0