ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಗದಗ : ಈದ್ ಮಿಲಾದ್ ಹಬ್ಬದ ಹಿನ್ನೆಲೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಶುಕ್ರವಾರ ಜರುಗಿತು.ಸಭೆಯನ್ನು ಉದ್ದೇಶಿಸಿ ಸಿಪಿಐ ವಿಕಾಶ ಲಮಾಣಿ ಮಾತನಾಡಿ, ಅಹಿತಕರ ಘಟನೆಗ ಅವಕಾಶ ನೀಡದಂತೆ ಹಬ್ಬ ಆಚರಿಸಿ, ಮೆರವಣಿಗೆ ಮಾಡುವವರು ಮುಂಚಿತವಾಗಿ ಪರವಾನಿಗೆ ತೆಗೆದುಕೊಳ್ಳುವದು ಕಡ್ಡಾಯವಾಗಿದೆ.

ಸರ್ಕಾರ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ಮೆರವಣಿಗೆ ಮಾಡಬೇಕು. ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಗೆ ಸಮುದಾಯಗಳ ಮುಖಂಡರ ಸಹಕಾರ ಅಗತ್ಯವಾಗಿದೆ ಮೆರವಣಿಗೆಯನ್ನು ಸಾಯಾಂಕಾಲ ಬೆಗ ಅತ್ಯಗೊಳಿಸಿ ಪೊಲೀಸ್ ಜೊತೆ ಸಹಕರಿಸಿ ಎಂದರು.

ಈ ಸಂದರ್ಭದಲ್ಲಿ ಪಿಎಸ್.ಐ.ಪ್ರಕಾಶ.ಡಿ.ಶಿವಾನಂದ ಪಾಟೀಲ್ ಸುಲೇಮಾನಸಾಭ ಕಣಕೆ ಮುಕ್ತಾರಾಹ್ಮದ ಗದಗ ಶರಣು ಗೋಡಿ,ಇಸ್ಮಾಯಿಲ್ ಆಡೂರ್, ಲೋಕೇಶ ಸುತಾರ,ಸಾಹೇಬಜಾನ್ ಹವಾಲ್ದಾರ್, ಜಾಕೀರ ಹುಸೇನ್ ಹವಾಲ್ದಾರ್, ಸುರೇಶ ಹಟ್ಟಿ ಚಂದ್ರು ಹಂಪಣ್ಣವರ ಫಯಾಜ ಅಹಮ್ಮದ ಅತ್ತಿಗೇರಿ ಬಸುರಾಜ ಹಿರೇಮನಿ ಬಸವರಾಜ ಕಲ್ಲೂರ ಪ್ರಕಾಶ ಕೊಂಚಿಗೇರಿಮಠ ಜಹೀರ ಅಹಮ್ಮದ ಸಿದ್ದಾಪುರ, ಮಂಜುನಾಥ ಹೊತಗಿಮಠ ಸೇರಿದಂತೆ ಅನೇಕರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

07/10/2022 01:16 pm

Cinque Terre

9.5 K

Cinque Terre

0