ಗದಗ: ಆಯುಷ್ಮಾನ ಆರೋಗ್ಯ ಕರ್ನಾಟಕ ಕಾರ್ಯಕ್ರಮ ಕುರಿತು ಗದಗ, ರೋಣ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ ತಾಲೂಕ ಲಕ್ಷ್ಮೇಶ್ವರ ಹಾಗೂ ನರಗುಂದದಲ್ಲಿ ಸಂಚಾರಿ ಎಲ್.ಇ.ಡಿ. ವಾಹನದ ಮೂಲಕ ಐಇಸಿ ಕಾರ್ಯಚಟುವಟಿಕೆಯನ್ನು ಅಕ್ಟೋಬರ 05 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಸಂಚಾರಿ ಎಲ್.ಇ.ಡಿ. ವಾಹನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಜಗದೀಶ ನುಚ್ಚಿನ್ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ವಾಯ್. ಕೆ. ಭಜಂತ್ರಿ ಶ್ರೀ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಉಮೇಶ ಕರಮುಡಿ, ಶ್ರೀಮತಿ ಗೀತಾ ಕಾಂಬಳೆ, ಹಾಗೂ ಶ್ರೀಮತಿ ಪುಷ್ಪಾ ಪಾಟೀಲ ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು.
Kshetra Samachara
06/10/2022 05:28 pm